ನೂತನ ಸಹಾಯಕ ಧರ್ಮಗುರು ವಂ.ಮರ್ವಿನ್ ಪ್ರವೀಣ್ ಲೋಬೋ ಆಗಮನ
ಪುತ್ತೂರು: ಮಾಯ್ ದೆ ದೇವುಸ್ ಚರ್ಚ್ನಲ್ಲಿ ಸಹಾಯಕ ಧರ್ಮಗುರುಗಳಾಗಿದ್ದ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ರವರು ಮೇ.21ರಂದು ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನಕ್ಕೆ ನೂತನ ಸಹಾಯಕ ಧರ್ಮಗುರುಗಳಾಗಿ ಮೂಡಬಿದ್ರೆಯ ಮರ್ವಿನ್ ಪ್ರವೀಣ್ ಲೋಬೋ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್:
ಬೆಳ್ತಂಗಡಿ ತಾಲೂಕಿನ ವೇಣೂರಿನವರಾದ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ರವರು ಕಳೆದ 2 ವರ್ಷದಿಂದ ಪುತ್ತೂರು ಮಾಯ್ ದೆ ದೇವುಸ್ ಚರ್ಚ್ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಆದೇಶದಂತೆ ಪೂನಾದಲ್ಲಿನ ಜ್ಞಾನದೀಪ ಸಂಸ್ಥೆಯಲ್ಲಿ ಉನ್ನತ ಧಾರ್ಮಿಕ ಶಿಕ್ಷಣ ಪಡೆಯಲು ವರ್ಗಾವಣೆಗೊಂಡು ತೆರಳಿದ್ದಾರೆ. ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.
ವಂದನೀಯ ಮರ್ವಿನ್ ಪ್ರವೀಣ್ ಲೋಬೋ:
ಮೂಡಬಿದ್ರೆ ಅಲಂಗಾರಿನವರಾದ ಇವರು 2025ರ ಎಪ್ರಿಲ್ 30ರಂದು ಗುರುದೀಕ್ಷೆ ಪಡೆದು ಪ್ರಥಮವಾಗಿ ಪುತ್ತೂರು ಮಾಯ್ ದೆ ದೇವುಸ್ ಚರ್ಚ್ಗೆ ಸಹಾಯಕ ಧರ್ಮಗುರುಗಳಾಗಿ ಆಗಮಿಸಿದ್ದಾರೆ. ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಜರ್ನಲಿಸಂನಲ್ಲಿ ಬಿಎ ಪದವಿ ಪಡೆದಿದ್ದಾರೆ.