ಪುತ್ತೂರು: ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಯನ್ಸಸ್ ಕರ್ನಾಟಕ ಇವರು ನಡೆಸಿದ ಬಿಡಿಎಸ್ ಪದವಿ ಪರೀಕ್ಷೆಯಲ್ಲಿ ಉಪ್ಪಿನಂಗಡಿ ರಾಮನಗರದ ಡಾ.ರಿಶಾಕಿರಣ್ ಪಿ.ಟಿ. ಅವರು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿಯನ್ನು ಏಳು ರ‍್ಯಾಂಕ್‌ಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಪೂರೈಸಿರುತ್ತಾರೆ.
ಹ್ಯೂಮನ್ ಫಿಶಿಯೋಲಜಿ ಆಂಡ್ ಬಯೋಕೆಮಿಸ್ಟ್ರಿಯಲ್ಲಿ 10ನೇ ರ‍್ಯಾಂಕ್, ಡೆಂಟಲ್ ಅನಾಟಮಿ ಆಂಡ್ ಓರಲ್ ಹಿಸ್ಟಾಲಜಿಯಲ್ಲಿ 10ನೇ ರ‍್ಯಾಂಕ್, ಜನರಲ್ ಪೆಥಾಲಜಿ ಆಂಡ್ ಮೈಕ್ರೋ ಬಯಾಲಜಿಯಲ್ಲಿ 7ನೇ ರ‍್ಯಾಂಕ್, ಪ್ರಿ ಕ್ಲಿನಿಕಲ್ ಕನ್ಸರ್ವೇಟಿವ್‌ನಲ್ಲಿ 7ನೇ ರ‍್ಯಾಂಕ್, ಒರಲ್ ಮೆಡಿಸಿನ್ ಆಂಡ್ ರೇಡಿಯೋಲಜಿಯಲ್ಲಿ 7ನೇ ರ‍್ಯಾಂಕ್, ಕನ್ಸರ್ವೇಟಿವ್ ಡೆಂಟಿಸ್ಟ್ರಿ ಆಂಡ್ ಎಂಡೋ ಡೋಂಟಿಕ್ಸ್‌ನಲ್ಲಿ 10ನೇ ರ‍್ಯಾಂಕ್, ಓರಲ್ ಆಂಡ್ ಮ್ಯಾಕ್ಸಿಲೋ ಫೇಶಿಯಲ್ ಸರ್ಜರಿಯಲ್ಲಿ 2ನೇ ರ‍್ಯಾಂಕ್ ಪಡೆದಿರುತ್ತಾರೆ.
ಇವರು ಬೆಂಗಳೂರಿನ ಕೆಎಲ್‌ಇ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸಸ್‌ನಲ್ಲಿ ಬಿಡಿಎಸ್ ವ್ಯಾಸಂಗ ಪಡೆದಿದ್ದು ನಾಲ್ಕು ವರ್ಷಗಳಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ದಂತ ವೈದ್ಯಕೀಯ ಪದವಿಯನ್ನು ಪೂರೈಸಿರುತ್ತಾರೆ. ಇವರು ಉಪ್ಪಿನಂಗಡಿ ರಾಮನಗರ ನಿವಾಸಿ ತಿಲಕಾಕ್ಷ ಕೆ., ಮತ್ತು ಪುಷ್ಪಲತಾ ಎಂ.ಇವರ ಪುತ್ರಿ. ಜ್ಞಾನೋದಯ ಬೆಥನಿ ವಿದ್ಯಾಲಯ ನೆಲ್ಯಾಡಿ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ಅಂಬಿಕಾ ಪದವಿಪೂರ್ವ ಕಾಲೇಜು ಪುತ್ತೂರು ಇಲ್ಲಿನ ಹಿರಿಯ ವಿದ್ಯಾರ್ಥಿನಿಯಾಗಿದ್ದಾರೆ.