ʼ918ʼ ಕನ್ನಡ ಕಿರುಚಿತ್ರದ ಪೋಸ್ಟರ್ ಬಿಡುಗಡೆ

0

ಪುತ್ತೂರು: ಉಡುಪಿ ಮಣಿಪಾಲದ ಪ್ರತಿಭಾವಂತ ಯುವ ಕಲಾವಿದರು ಅಭಿನಯಿಸಿರುವ ಶ್ರೀ ತುಕಾರಾಮ ಬಾಯಾರು ನಿರ್ದೇಶನದ ವಿಭಿನ್ನ ಶೈಲಿಯ ಪ್ರೇಮಕಥೆಯುಳ್ಳ 918 ಎಂಬ ಕನ್ನಡ ಕಿರುಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

ಉದಯಕುಮಾರ್ ಆಚಾರ್ಯ ಬಾಯಾರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ನಾಯಕ ನಟರಾಗಿ ಸಂದೇಶ್ ಆಚಾರ್ಯ, ನಾಯಕಿ ಕವಿತಾ, ಗಿರೀಶ್ ಆಚಾರ್ಯ ಉಡುಪಿ, ಸೂರಜ್ ಆಚಾರ್ಯ ಉಡುಪಿ, ಗುರುಪ್ರಸಾದ್ ಆಚಾರ್ಯ ಹೊಸನಗರ, ವರ್ಷಿಣಿ ವೈ ಅಮೀನ್ ಮಣಿಪಾಲ, ವೈಷ್ಣವಿ ಖಾರ್ವಿ ಮುಂತಾದವರು ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here