ಪುತ್ತೂರು ನಗರಸಭೆಗೆ 15 ಕೋಟಿ, ವಿಟ್ಲಕ್ಕೆ ರೂ.5 ಕೋಟಿ : ವಿಶೇಷ ಅನುದಾನಕ್ಕೆ ನಗರಾಭಿವೃದ್ದಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ಪುತ್ತೂರು ನಗರಸಭೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್‌ಗೆ ವಿಶೇಷ ಯೋಜನೆಯಡಿ 20 ಕೋಟಿ ರೂ ಅನುದಾನ ನೀಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ನಗರಾಭಿವೃದ್ದಿ ಸಚಿವ ರಹೀಂ ಖಾನ್ ಅವರಿಗೆ ಮನವಿ ಮಾಡಿದ್ದಾರೆ.

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ತುರ್ತಾಗಿ ಅನೇಕ ಅಭಿವೃದ್ದಿ ಕಾಮಗಾರಿ ನಡೆಯಬೇಕಿದ್ದು ಇದಕ್ಕಾಗಿ ವಿಶೇಷ ಯೋಜನೆಯಡಿ 15 ಕೋಟಿ ರೂ ಅನುದಾನ ನೀಡಬೇಕು ಮತ್ತು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿಗೆ ಹೆಚ್ಚುವರಿ 5 ಕೋಟಿ ರೂ ನೀಡುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದಾರೆ.

ಪಶುಸಂಗೋಪನಾ ಕಾಲೇಜು ಆರಂಭಕ್ಕೆ ಮನವಿ
ಈ ಶೈಕ್ಷಣಿಕ ವರ್ಷದಲ್ಲೇ ಕೊಯಿಲದಲ್ಲಿರುವ ಪಶುವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವಂತೆ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶು ವೈದ್ಯಕೀಯ ಕಾಲೇಜಿಗೆ ಈಗಾಗಲೇ ಸರಕಾರದಿಂದ ಅನುದಾನ ಬಿಡುಗಡೆಯಾಗಿದ್ದು ಕಾಲೇಜು ಪ್ರಾರಂಭ ಮಾಡುವ ಬಗ್ಗೆ ಸರಕಾರ ತೀರ್ಮಾನ ಮಾಡಿದೆ ಎಂದು ಶಾಸಕರಿಗೆ ಸಚಿವರು ಈ ಹಿಂದೆ ತಿಳಿಸಿದ್ದರು. ಕಾಲೇಜು ಪ್ರಾರಂಭಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಶೀಘ್ರವೇ ರೂಪೀಕರಿಸಿ ಕಾಲೇಜು ಆರಂಭ ಮಾಡುವಂತೆ ಶಾಸಕರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here