ನೆಲ್ಯಾಡಿ: ರೈಲಿನಿಂದ ಜಿಗಿದು ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಿವಾಸಿ ಮಹಿಳೆಯೋರ್ವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಗರಡಿ ರೋಡ್ ಕರಂದಾಡಿ ಪಾದೆ ಮನೆ ನಿವಾಸಿ ದೊರೆಸ್ವಾಮಿ ಹಾಗೂ ಇಂದ್ರಾಣಿಯವರ ಪುತ್ರ ಮೋಹನ್(43ವ.) ನಾಪತ್ತೆಯಾದವರು. ಮೋಹನ್ ಮಾನಸಿಕ ರೋಗಿಯಾಗಿದ್ದು 25 ವರ್ಷಗಳಿಂದ ಮಾತ್ರೆ ಸೇವಿಸುತ್ತಿದ್ದಾರೆ. ಮೇ 17 ರಂದು ಇಂದ್ರಾಣಿ ಅವರು ಮಗ ಮೋಹನ್ ಮತ್ತು ಸೊಸೆಯೊಂದಿಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮೈಸೂರಿನಲ್ಲಿರುವ ಮಗಳ ಗೃಹಪ್ರವೇಶಕ್ಕೆ ಹೋಗುವರೇ ರೈಲ್ನಲ್ಲಿ ಹೊರಟು ಬಂದಿದ್ದು ರಾತ್ರಿ 10 ಗಂಟೆ ಸಮಯಕ್ಕೆ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದಾರೆ. ನೆಟ್ಟಣ ರೈಲು ನಿಲ್ದಾಣದಲ್ಲಿ ನಿಂತು ರೈಲು ಹಾಸನ ಕಡೆಗೆ ಹೊರಟು ಚಲಿಸುತ್ತಿರುವ ಸಮಯ ಮೋಹನ ರೈಲಿನಿಂದ ಹೊರಕ್ಕೆ ಜಿಗಿದು ತಪ್ಪಿಸಿಕೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಇಂದ್ರಾಣಿ ಅವರು ನೀಡಿಡ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.