ಪುತ್ತೂರು: ಉದ್ಯಮಿ ಸುಧೀರ್ ಶೆಟ್ಟಿ ತೆಂಕಿಲ ಅವರ ಮಾಲಕತ್ವದ ಬಹು ಮಹಡಿ ವಾಣಿಜ್ಯ ಸಂಕೀರ್ಣ ‘ವಿಘ್ನೇಶ್ವರ ಕಾಂಪ್ಲೆಕ್ಸ್’ ಮೇ 22ರಂದು ಇಲ್ಲಿನ ಪಡೀಲ್ನಲ್ಲಿ ಉದ್ಘಾಟನೆಗೊಂಡಿದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬನ್ನೂರು ಸಂತ ಅಂತೋನಿಯವರ ದೇವಾಲಯದ ಧರ್ಮಗುರು ಫಾ.ಬಾಲ್ತಝರ್ ಪಿಂಟೋ ಅವರು ಮಾತನಾಡಿ, ನಾನು 22 ವರ್ಷಗಳ ಹಿಂದೆ ಪುತ್ತೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪುತ್ತೂರು ಇಷ್ಟೆಲ್ಲಾ ಸುಧಾರಣೆಯನ್ನು ಕಂಡಿರಲಿಲ್ಲ. ಇದೀಗ ತುಂಬಾನೇ ಸುಧಾರಣೆ ಹಾಗೂ ಅಭಿವೃದ್ಧಿಯನ್ನು ನಾವೆಲ್ಲ ಕಾಣುತ್ತಿದ್ದೇವೆ ಜೊತೆಗೆ ಶಿಕ್ಷಣ ಕ್ಷೇತ್ರ ಹಾಗೂ ಆರ್ಥಿಕ ಕ್ಷೇತ್ರದಲ್ಲೂ ಬಹಳಷ್ಟು ಸುಧಾರಣೆಯಾಗುತ್ತಿದೆ. ಭಗವಂತನು ನಮಗೆಲ್ಲರಿಗೂ ಹಲವು ರೀತಿಯ ಪ್ರತಿಭೆ,ಅವಕಾಶವನ್ನು ನೀಡಿದ್ದಾರೆ. ಇದನ್ನು ನಾವು ಕೇವಲ ನಮ್ಮ ಏಳಿಗೆಗಾಗಿ ಮಾತ್ರವಲ್ಲದೇ ಪರರ ಏಳಿಗೆಗೂ ಉಪಯೋಗಿಸಿದರೆ ಸಮಾಜ ಸುಧಾರಣೆಯ ಹಾದಿಯನ್ನು ಕಂಡು ಅಭಿವೃದ್ಧಿಗೆ ಸಹಕಾರಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಸರ್ವ ಧರ್ಮೀಯರನ್ನೂ ಪ್ರೀತಿಸುವಂಥ,ಒಪ್ಪಿಕೊಳ್ಳುವ ಮನೋಭಾವನೆಯನ್ನು ಹೊಂದಿರುವ ನೂತನ ವಾಣಿಜ್ಯ ಸಂಕೀರ್ಣದ ಮಾಲೀಕರಿಗೆ ಅಭಿನಂದನೆ ಸಲ್ಲಿಸುವೆ ಜೊತೆಗೆ ದೇವರ ಕೃಪೆಯೊಂದಿಗೆ ಸಂತೃಪ್ತಿ,ಸಂತೋಷ,ಸುಖ ಸದಾ ಒದಗಿ ಬರಲಿಯೆಂದು ಪ್ರಾರ್ಥಿಸುವೆ ಎಂದು ಹೇಳಿ ಅವರು ಶುಭ ಹಾರೈಸಿದರು.
ಉದ್ಯಮಿ ಸುಧೀರ್ ಶೆಟ್ಟಿಯವರ ಉದ್ಯಮ ಕ್ಷೇತ್ರದ ಗುರು,ಉದ್ಯಮಿಯೂ ಆಗಿರುವ ಶಿವಪ್ರಸಾದ್ ಶೆಟ್ಟಿ ಮಾತನಾಡಿ,ಸುಧೀರ್ ಶೆಟ್ಟಿಯವರ ವೈಶಿಷ್ಟ್ಯವೇ ವಿಭಿನ್ನ. 25 ವರ್ಷಗಳ ಹಿಂದೆ ನಮ್ಮ ಸಂಸ್ಥೆಯನ್ನು ಸೇರಿಕೊಂಡಾಗ ಅವರ ಬಗ್ಗೆ ನನಗೆ ಪರಿಚಯವಿರಲಿಲ್ಲ. ನನ್ನ ಬಾವನಿಂದ ಸುಧೀರ್ ಶೆಟ್ಟಿ ಸಂಬಂಧಿಕರೆಂದು ತಿಳಿಯಿತು.ನಂತರದ ದಿನಗಳಲ್ಲಿ ಅವರಿಗೆ ಜವಾಬ್ದಾರಿ ನೀಡಿದೆ. ಅವರಲ್ಲಿದ್ದ ಗೌರವ,ನಿಷ್ಠೆ ಅವರು ಇಷ್ಟರಮಟ್ಟಿಗೆ ಬೆಳೆಯಲು ಸಹಕಾರಿಯಾಯಿತು.ಅವರ ಈ ವ್ಯಕ್ತಿತ್ವ ಹೀಗೆಯೇ ಮುಂದುವರಿಯಲಿ,ಕಟೀಲು ದೇವಿಯ ಆಶೀರ್ವಾದ ಸದಾ ಅವರ ಮೇಲಿರಲಿಯೆಂದು ಹಾರೈಸಿದರು. ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾೖಕ್ ಶುಭ ಹಾರೈಸಿದರು. ಮಾಲೀಕ ಸುಧೀರ್ ಶೆಟ್ಟಿಯವರ ತಂದೆ ದಯಾನಂದ ಶೆಟ್ಟಿ ತೆಂಕಿಲ ದೀಪ ಪ್ರಜ್ವಲನೆ ನೆರವೇರಿಸಿ ಉದ್ಘಾಟಿಸಿ ಶುಭಹಾರೈಸಿದರು.ಅಬ್ದುಲ್ ರಝಾಕ್ ಕಂಪ ವೇದಿಕೆಯಲ್ಲಿ ಹಾಜರಿದ್ದರು.
ಧಾರ್ಮಿಕ ಕಾರ್ಯಕ್ರಮ:
ವಾಣಿಜ್ಯ ಸಂಕೀರ್ಣ ಉದ್ಘಾಟನೆ ಪ್ರಯುಕ್ತ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮ ನಡೆಯಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅರ್ಚಕ ಜಯರಾಮ್ ಭಟ್ ಹಾಗೂ ಉದಯ ಭಟ್ ತಂಡ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.ಆ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅರ್ಚಕ ಅಕ್ಷಯ ಉಡುಪ ಮತ್ತು ರಮೇಶ್ ಭಟ್ ಪುತ್ತೂರು ಬಳಗದವರು ಕಟೀಲು ದೇವಿಗೆ ಚೌಕಿ ಪೂಜೆ ನೆರವೇರಿಸಿದರು.
‘ಸಹಕಾರ ರತ್ನ’ ಸವಣೂರು ಸೀತಾರಾಮ ರೈ,ಶ್ರೀ ರಾಮಕೃಷ್ಣ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ,ಮಾಜಿ ನಗರಸಭಾಧ್ಯಕ್ಷರುಗಳಾದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಜೀವಂಧರ್ ಜೈನ್,ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು,ಆರ್.ಸಿ.ನಾರಾಯಣ ರೆಂಜ,ಉದ್ಯಮಿಗಳಾದ ವಿಕ್ರಂ ಶೆಟ್ಟಿ ಅಂತರ ಕೋಡಿಂಬಾಡಿ ಮತ್ತು ಅವರ ಪುತ್ರ ಸಾಮ್ರಾಟ್ ಶೆಟ್ಟಿ,ಪ್ರಸನ್ನ ಶೆಟ್ಟಿ ‘ಸಿಝ್ಲರ್’ ಸಾಮೆತ್ತಡ್ಕ,ಶಶಾಂಕ ಜೆ.ಕೊಟೇಚಾ,ಪದ್ಮನಾಭ ಶೆಟ್ಟಿ,ಪ್ರಶಾಂತ್ ಎಂಟರ್ಪ್ರೈಸಸ್ನ ಪ್ರಶಾಂತ್ ಶೆಣೈ,ಡೆಕೋಪ್ಲಾಸ್ಟ್ನ ನಿರ್ದೇಶಕರಾದ ಕೃಷ್ಣ ಭಟ್ ಫ್ಯಾಮಿಲಿ, ರಮೇಶ್ ನಾಯಕ್,ಚಂದ್ರಶೇಖರ ಕಲ್ಲಗುಡ್ಡೆ,ಮುನ್ನಾ ಇಲೆಕ್ಟ್ರಿಕಲ್ಸ್ ನ ಕೃಷ್ಣ ಪ್ರಶಾಂತ್,ಸುಧೀರ್ ಶೆಟ್ಟಿ ಪಂಜಳ, ನಿವೃತ್ತ ಅಬಕಾರಿ ಸಬ್ ಇನ್ಸ್ಪೆಕ್ಟರ್ ಅಂಗಾರ,ಉಮೇಶ್ ರೈ ನಗರ,ಹರಿಪ್ರಸಾದ್ ಕರ್ಮಲ,ರಾಮಕೃಷ್ಣ ಅಶೀರ್ವಾದ ಶಾಮಿಯಾನ,ಮಹಾಲಿಂಗೇಶ್ವರ ಇಂಜಿನಿಯರಿಂಗ್ ವರ್ಕ್ಸ್ನ ದಯಾನಂದ ಗೌಡ,ಉದಯ ಕಮಾರ್ ಹೆಚ್., ಕೃಷ್ಣ ಸೌಧ ಸಂಕೀರ್ಣ ಮಾಲೀಕ ಮನೋಹರ್,ರತನ್ ಪಡೀಲ್,ಶ್ರೀ ದೇವಿ ಗ್ಲಾಸ್ ಆಂಡ್ ಪ್ಲೈವುಡ್ನ ಹರೀಶ್, ವಿಘ್ನೇಶ್ವರ ಸ್ಟೀಲ್ ಆಂಡ್ ಹಾರ್ಡ್ವೇರ್ನ ರೊನಾಲ್ಡ್ ಮಸ್ಕರೇನ್ಹಸ್, ದೀಕ್ಷಾ ನೈತಾಡಿ,ಪ್ರಶಾಂತ್ ಪಡೀಲ್ ಹಾಗೂ ರಾಹುಲ್ ಕೇಪುಳು,ಮಾಲೀಕರ ಸಹೋದರಿ ಮಮತಾ ಶೆಟ್ಟಿ ಹಾಗೂ ವಿಶ್ವನಾಥ ಶೆಟ್ಟಿ ಕರ್ಕುಂಜ ದಂಪತಿ ಮತ್ತವರ ಮಕ್ಕಳಾದ ಉದ್ಯಮಿ ವಿನೀತ್ ಶೆಟ್ಟಿ ಹಾಗೂ ವಿಶಾಂತ್ ಶೆಟ್ಟಿ,ಸೊಸೆಯಂದಿರಾದ ಅಕ್ಷಿತಾ ಶೆಟ್ಟಿ ಹಾಗೂ ಅದಿತಿ ಶೆಟ್ಟಿ, ಮೊಮ್ಮಕ್ಕಳಾದ ವಿಯಾನ್,ವಿರಾಧ್ಯ ಮತ್ತು ವಿಶಿಕ, ಶೋಭಾ ದಿನೇಶ್ ಶೆಟ್ಟಿ ತೆಂಕಿಲ ಮತ್ತು ಮಕ್ಕಳಾದ ವಿಕಾಶ್ ಹಾಗೂ ವೀಕ್ಷಾ,ವಿಶ್ವನಾಥ ಶೆಟ್ಟಿ ಕಂಗ್ವೆ,ರವಿಪ್ರಸಾದ್ ಶೆಟ್ಟಿ ಬನ್ನೂರು, ಸಿಡ್ಕೋ ಅಧ್ಯಕ್ಷ ಟಿ.ವಿ.ರವೀಂದ್ರನ್, ಚಂದ್ರಶೇಖರ್ ರಾವ್ ಬಪ್ಪಳಿಗೆ,ರಾಧಾಕೃಷ್ಣ ನಂದಿಲ,ರಮೇಶ್ ರೈ ಡಿಂಬ್ರಿ ಸಹಿತ ಹಲವಾರು ಗಣ್ಯರು ಆಗಮಿಸಿ ಶುಭಹಾರೈಸಿದರು.ವಿನೀತ್ ಶೆಟ್ಟಿ, ರೊನಾಲ್ಡ್ ಮಸ್ಕರೇನಸ್,ಶೋಭಾ ಶೆಟ್ಟಿ,ವಿಶ್ವನಾಥ ಶೆಟ್ಟಿ ಹಾಗೂ ನಹುಷ ಭಟ್ ಅತಿಥಿಗಳನ್ನು ಸ್ವಾಗತಿಸಿದರು.
ನ್ಯಾಯವಾದಿ,ನೋಟರಿ ಭಾಸ್ಕರ್ ಕೋಡಿಂಬಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಉದ್ಯಮಿ ಜಾನ್ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿ, ನಹುಷಾ ಭಟ್ ಪಳನೀರು ವಂದಿಸಿದರು.ಸೇಡಿಯಾಪು ಕೋಸ್ಟಲ್ ಕೋಕನಟ್ ಇಂಡಸ್ಟ್ರೀಸ್ ಮಾಲೀಕ ಡೆನ್ನಿಸ್ ಮಸ್ಕರೇನ್ಹಸ್ ವಿವಿಧ ರೀತಿಯಲ್ಲಿ ಸಹಕರಿಸಿದರು.ಶಮಿತಾ ಸುಧೀರ್ ಶೆಟ್ಟಿ ದಂಪತಿ ತೆಂಕಿಲ ಹಾಗೂ ಮಕ್ಕಳಾದ ವಿಜ್ಙಾತ್ ಶೆಟ್ಟಿ ಮತ್ತು ವಿಶೃತಿ ಶೆಟ್ಟಿ ಸ್ವಾಗತಿಸಿ,ಸಹಕಾರ ಕೋರಿದರು.
ಸನ್ಮಾನ:
ವಿಘ್ನೇಶ್ವರ ಕಾಂಪ್ಲೆಕ್ಸ್ ಕಟ್ಟಡದ ವಿನ್ಯಾಸಗಾರ ಏಳ್ಮುಡಿ ಬಳಿಯ ನಿರ್ಮಾಣ್ ಅಸೋಸಿಯೆಟ್ಸ್ನ ಸಚ್ಚಿದಾನಂದ,ಸ್ಟ್ರಕ್ಚರಲ್ ಇಂಜಿನಿಯರ್ ಆಕರ್ಷ್ ಬಿ.ಎಸ್,ಕೆಮ್ಮಾಯಿ ವರಾಹಿ ಕನ್ಸ್ಟ್ರಕ್ಷನ್ನ ರಕ್ಷಿತ್ ಆಚಾರ್ಯ,ಮುನ್ನಾ ಇಲೆಕ್ಟ್ರಿಕಲ್ಸ್ನ ಕೆ.ಕೃಷ್ಣ ಪ್ರಶಾಂತ್, ಲಿಫ್ಟ್ ಜೋಡಣೆ ಕಾರ್ಯ ಮಾಡಿರುವ ಲೋಕೇಶ್ ರೈ,ಚಂದ್ರಶೇಖರ ಕಲ್ಲಗುಡ್ಡೆ ಇವರುಗಳನ್ನು ಅತಿಥಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು.
‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ:
ಶುಭಾರಂಭದ ಪ್ರಯುಕ್ತ ಸಂಜೆ 6 ರಿಂದ ವಿದ್ಯುತ್ ದೀಪ ಹಾಗು ಹೂಗಳಿಂದ ಶೃಂಗಾರಗೊಂಡಿರುವ ರಂಗ ಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ನೆ’ ಯಕ್ಷಗಾನ ಬಯಲಾಟ ವಿಜ್ರಂಭಣೆಯಿಂದ ನಡೆಯಿತು. ಕಾಂಪ್ಲೆಕ್ಸ್ನ ವಿಶೇಷತೆಗಳುಈ ವಾಣಿಜ್ಯ ಸಂಕೀರ್ಣ ಒಟ್ಟು 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ನೆಲ ಅಂತಸ್ತು + 3 ಬಹುಮಹಡಿಯ ಕಾಂಪ್ಲೆಕ್ಸ್ ಇದಾಗಿದೆ. ಸಂಪೂರ್ಣ ಟೈಲ್ಸ್ ಹಾಸುವಿಕೆಯ ನೆಲ, ಪ್ರತೀ ಅಂತಸ್ತಿಗೂ ಲಿಫ್ಟ್ ಸೌಲಭ್ಯ ಇದೆ. ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಿಸಲಾಗಿದೆ.ನೂತನ ವಾಣಿಜ್ಯ ಸಂಕೀರ್ಣದಲ್ಲಿ ಈಗಾಗಲೇ ಬ್ಯಾಂಕ್ ಆಫ್ ಮಹಾರಾಷ್ಟ್ರ, ದಂತ ಚಿಕಿತ್ಸಾಲಯ, ಬ್ಯೂಟಿಪಾರ್ಲರ್ಗಳು ತೆರೆದಿದ್ದು, ಸೊಸೈಟಿ ಮತ್ತಿತರ ಕಚೇರಿಗಳಿಗೆ ಯೋಗ್ಯವಾದ ಕೊಠಡಿಗಳನ್ನು ಹೊಂದಿದೆ.ತೆರೆದ ಬಾವಿಯ ನೀರಿನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು, ಪಡೀಲ್ ಜಂಕ್ಷನ್ನಲ್ಲಿ ತಲೆ ಎತ್ತಿರುವ ನೂತನ ಕಾಂಪ್ಲೆಕ್ಸ್ ಪುತ್ತೂರಿನ ವಾಣಿಜ್ಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆಯಾಗಿ ಕಂಗೊಳಿಸುತ್ತಿದೆ.