ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನ – ಬೆಳಿಯೂರು ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿಗೆ 100% ಫಲಿತಾಂಶ

0

ಸರಕಾರಿ ಪದವಿಪೂರ್ವ ಕಾಲೇಜು, ಬೆಳಿಯೂರು ಕಟ್ಟೆ ಪುತ್ತೂರು ತಾಲೂಕು 2025ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 30 ವಿದ್ಯಾರ್ಥಿಗಳು ಹಾಜರಾಗಿದ್ದು, ಓರ್ವ ವಿದ್ಯಾರ್ಥಿನಿಯು ಅನುರ್ತ್ತಿಣಗೊಂಡ ಹಿನ್ನಲೆ 96.6% ಫಲಿತಾಂಶ ಬಂದಿತ್ತು. ಮರು ಮೌಲ್ಯಮಾಪನದ ನಂತರ ಆ ವಿದ್ಯಾರ್ಥಿನಿಯು ಉತ್ತೀರ್ಣಗೊಂಡಿರುತ್ತಾರೆ.

ಸಂಸ್ಥೆಯ ಫಲಿತಾಂಶವು 100% ಆಗಿದ್ದು, ಇವರಲ್ಲಿ ಆರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮೂರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗು ಮೂರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಶಾಲೆಯು A ಶ್ರೇಣಿಯನ್ನು ಪಡೆದಿರುತ್ತದೆ. ಶಾಲಾ ಫಲಿತಾಂಶಕ್ಕಾಗಿ ಶ್ರಮಿಸಿದ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಪೋಷಕರು ಬೋಧಕ ವರ್ಗ ಹಾಗೂ ಬೋಧಕೇತರ ವರ್ಗದವರಿಗೆ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here