ಪುತ್ತೂರು: ಶ್ರೀಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಮತ್ತು ಮುಖ್ಯರಸ್ತೆಯ ಪ್ರಧಾನ ಅಂಚೆ ಕಚೇರಿ ಬಳಿಯ ಹೆಗ್ಡೆ ಆರ್ಕೇಡ್‌ನಲ್ಲಿರುವ ಅಶ್ವಿನ್ ನೇತ್ರ ಚಿಕಿತ್ಸಾಲಯದ ಸಹಯೋಗದಲ್ಲಿ 61ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರವು ಮೇ.25ರಂದು ಕೋರ್ಟ್‌ರಸ್ತೆಯ ಸತ್ಯಸಾಯಿ ಮಂದಿರದಲ್ಲಿ ನಡೆಯಿತು.
ಅಶ್ವಿನ್ ನೇತ್ರ ಚಿಕಿತ್ಸಾಲಯ ಹಾಗೂ ಅಪ್ಟಿಕಲ್ಸ್‌ನ ತಜ್ಞ ವೈದ್ಯರಾದ ಡಾ.ಅಶ್ವಿನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ.ವಿಕಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ನೇತ್ರಾಧಿಕಾರಿ ಶಾಂತರಾಜ್ ಶಿಬಿರದ ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷರಾದ ಪ್ರಸನ್ನ ಭಟ್ ಸಮಿತಿಯ ಚಟುವಟಿಕೆಗಳ ಮಾಹಿತಿ ನೀಡಿದರು. ಕಮಲ ಪ್ರಾರ್ಥಿಸಿದರು. ಡಾ.ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್ ಸ್ವಾಗತಿಸಿದರು. ರಘುನಾಥ ರೈ ವಂದಿಸಿದರು. ಸಂಚಾಲಕ ದಯಾನಂದ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯರಾದ ಪದ್ಮನಾಭ ನಾಯಕ್ ಸಹಕರಿಸಿದರು.
ಶಿಬಿರದಲ್ಲಿ ಒಟ್ಟು 168 ಮಂದಿ ದಾಖಲಾತಿ ಮಾಡಿದ್ದರು. 133 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. 17 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.