ಬೊಳುವಾರಿನಲ್ಲಿ ಪತ್ತನಾಜೆಗೆ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪತ್ತನಾಜೆಯ ಅಂಗವಾಗಿ ಮೇ.24ರಂದು ” ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಆನಂದಸವಣೂರು, ಮುರಳೀಧರ ಕಲ್ಲೂರಾಯ, ಪರೀಕ್ಷಿತ್ ಹಂದ್ರಟ್ಟ , ಸಮರ್ಥ ವಿಷ್ಣು ಈಶ್ವರ ಮಂಗಲ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ ( ಭಾಸ್ಕರ್ ಬಾರ್ಯ ಮತ್ತು ಗುಡ್ಡಪ್ಪ ಬಲ್ಯ ), ಬಲರಾಮ ( ಹರಿಣಾಕ್ಷಿ ಜೆ ಶೆಟ್ಟಿ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು ), ಜಾಂಬವ ( ಗುಂಡ್ಯಡ್ಕ ಈಶ್ವರ ಭಟ್ ), ನಾರದ ( ಭಾರತೀ ರೈ ಅರಿಯಡ್ಕ ), ಜಾಂಬವತಿ ( ಪ್ರೇಮ ಲತಾ ರಾವ್ ) ಸಹಕರಿಸಿದರು. ಇದೇ ಸಂದರ್ಭ ಜೂ.1 ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ” ಪಟ್ಲ ಸಂಭ್ರಮದ ದಶಮಾನೋತ್ಸವದ ” ಆಮಂತ್ರಣ ಪತ್ರಿಕೆಯನ್ನು ಪುತ್ತೂರು ಘಟಕದ ಪದಾಧಿಕಾರಿಗಳು ಸಂಘದ ಸದಸ್ಯರಿಗೆ ನೀಡಿ ಆಮಂತ್ರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿದರು. ಹರ್ಷ ಪುಣಚ ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here