ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಮತ್ತು ಜನಸಂಘದ ಕಾಲದಿಂದಲೂ ಸಕ್ರಿಯರಾಗಿದ್ದ ಕೊಂಬೆಟ್ಟು ನಿವಾಸಿ ಗೋಪಾಲಕೃಷ್ಣ ಪ್ರಭು(89 ವ)ರವರು ಮೇ.26ರಂದು ಬೆಳಗ್ಗೆ ನಿಧನರಾದರು.
ಎಚ್ ಗೋಪಾಲಕೃಷ್ಣ ಪ್ರಭು ಅವರು ಎರಡು ಬಾರಿ ಪುತ್ತೂರು ಪಂಚಾಯತ್ ಚುನಾವಣೆಗೆ ಜನಸಂಘದಿಂದ ಸ್ಪರ್ಧಿಸಿದ್ದರು. ಬಹುಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿ ವೃದ್ದಾಪ್ಯದಲ್ಲಿ ಕೊಂಬೆಟ್ಟು ಮನೆಯಲ್ಲಿ ವಾಸ್ತವ್ಯ ಹೊಂದಿದ್ದ ಇವರು ವಯೋಸಹಜ ಅವರು ನಿಧನರಾದರು. ಮೃತರು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕಿನ ಮಾಜಿ ನಿರ್ದೇಶಕರಾಗಿರುವ ಉದ್ಯಮಿ ವೆಂಕಟ್ರಾಯ ಪ್ರಭು ಸಹಿತ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.