ಜಗತ್ತಿನಾದ್ಯಂತ ಪರಸ್ಪರ ಹೋರಾಡುತ್ತಿದ್ದ ಎಷ್ಟೋ ದೇಶಗಳು ಈಗ ಸೌಹಾರ್ದತೆಯಿಂದ ಬಾಳುತ್ತಿವೆ.
ಒಂದು ದೇಶವಾಗಿದ್ದು ಸೌತ್ ಮತ್ತು ನಾರ್ತ್ ಎಂದು ಒಡೆದು ಹೋಗಿದ್ದ ವಿಯಟ್ನಾ ಇಂದು ಪುನಃ ಒಂದೇ ದೇಶವಾಗಿದೆ.- ಅಭಿಪ್ರಾಯಕ್ಕೆ ಆಹ್ವಾನ
*ಹಾಗಿರುವಾಗ ಒಂದೇ ದೇಶದ ಜನರಾಗಿದ್ದ ನಾವು ಪರಸ್ಪರ ವೈರಿಗಳಾಗಿ ಒಬ್ಬರು ಇನ್ನೊಬ್ಬರ ನಾಶಕ್ಕೆ ಪ್ರಯತ್ನಿಸಬೇಕೇ?. ಪಾಕಿಸ್ಥಾನ ಭಾರತ ಒಂದಾಗಿ ಬದುಕಲು ಸಾಧ್ಯವಿಲ್ಲವೇ?.
*ಭಯೋತ್ಪಾದನೆ, ದ್ವೇಷ ನಿವಾರಿಸಿ ವ್ಯವಹಾರ ಬಾಂಧವ್ಯ ಬೆಳೆಸಿ ಒಂದಾಗಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿಲ್ಲವೇ?
*ಭಾರತದೊಂದಿಗೆ ವೈರತ್ವ, ದ್ವೇಷ ಪಾಕಿಸ್ಥಾನದ ಆಡಳಿತಕ್ಕೆ ಮತ್ತು ಮಿಲಿಟರಿಗೆ ಅವರ ಅಸ್ಥಿತ್ವಕ್ಕಾಗಿ ಬೇಕೇ ಬೇಕು.
*ಪಾಕಿಸ್ಥಾನದ ಜನತೆಗೆ ಭಾರತದ ಜನತೆಗೆ ಅದು ಬೇಕೇ?. ಎರಡು ದೇಶದ ಜನರು ಶಾಂತಿ, ಸೌಹಾರ್ದತೆ ಬಯಸಿದರೆ, ವ್ಯವಹಾರ ಬೆಳೆಸಿದರೆ ಏನಾಗಬಹುದು?. ಪರಸ್ಪರ ಯುದ್ಧ , ಸಾವು ನೋವು, ಕಷ್ಟ ನಷ್ಟ ಕಡಿಮೆಯಾಗಿ ಅಭಿವೃದ್ಧಿ ಖಂಡಿತವಲ್ಲವೇ?
*ಅದಕ್ಕಾಗಿ ಪಾಕಿಸ್ಥಾನದ ಜನತೆ ಭಾರತದ ವಿರೋಧಿಗಳಾಗದೆ ಅವರ ಆಡಳಿತವನ್ನು, ಮಿಲಿಟರಿಯನ್ನು ನಿಯಂತ್ರಿಸಿ ಭಾರತದೊಂದಿಗೆ ಸೌಹಾರ್ದತೆಯಿಂದ ಬಾಳುವಂತೆ ಮಾಡಲು ನಾವು
ಪ್ರಯತ್ನಿಸಲು ಸಾಧ್ಯವಿಲ್ಲವೇ?.
*ಪಾಕಿಸ್ಥಾನದ ಭಯೋತ್ಪಾದನೆ, ಪಾಕಿಸ್ಥಾನದ ಆಡಳಿತ ಮತ್ತು ಮಿಲಿಟರಿಯನ್ನು ಮಾತ್ರ ಗುರಿಯಾಗಿರಿಸಿ ‘ಸಿಂಧೂರ ಆಪರೇಷನ್’ನಲ್ಲಿ ನಾವು ಜಯಗಳಿಸಿರುವಾಗ ಪಾಕಿಸ್ಥಾನದ ಜನರನ್ನು ನಾವು ವಿರೋಧಿಗಳೆಂದು ಪರಿಗಣಿಸದೆ ಅವರನ್ನು (ಅಲ್ಲಿಯ ಆಡಳಿತದ ವಿರೋಧಿಗಳನ್ನಾಗಿ ಮಾಡಿ) ನಮ್ಮ (ಭಾರತದ) ಪರವಾಗಿ ಸೌಹಾರ್ದತೆಗಾಗಿ ನಿಲ್ಲುವಂತೆ ಮಾಡಲು ಈ ಮೇಲಿನ ವಿಷಯ ಉತ್ತಮ ಅವಕಾಶ ಎಂದು ಪರಿಗಣಿಸುವುದು ಒಳಿತಲ್ಲವೇ?
| ಡಾ.ಯು.ಪಿ.ಶಿವಾನಂದ