ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಪುನರ್ ನಿರ್ಮಾಣಗೊಂಡ ಭಜನಾ ಮಂದಿರದ ಲೋಕಾರ್ಪಣೆ, ಶ್ರೀ ಸಿದ್ದಿವಿನಾಯಕ ದೇವರ ಛಾಯಾ ಬಿಂಬ ಪ್ರತಿಷ್ಟಾ ಮಹೋತ್ಸವವು ಮೇ.28ರಿಂದ 30 ರವರೆಗೆ ನಡೆಯಲಿದ್ದು, ಇದರ ಉಪಸಮಿತಿಗಳ ಅಂತಿಮ ಹಂತದ ಪೂರ್ವ ಸಿದ್ಧತಾ ಸಭೆಯು ಮೇ.25ರಂದು ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ವಿವಿಧ ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಅನುಭವವಿರುವ ರಾಧಾಕೃಷ್ಣ ಬೋರ್ಕರ್ ಕತ್ತಲೆಕಾನವರು ಕಾರ್ಯಕ್ರಮದ ರೂಪುರೇಷೆಗಳಿಗೆ ಮಾರ್ಗದರ್ಶನ ನೀಡಿದರು.
ಈ ವೇಳೆ ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಅಧ್ಯಕ್ಷ ಶ್ರೀಕುಮಾರ್ ಭಟ್ ಅಡ್ಯೆತ್ತಿಮಾರು, ಪ್ರಧಾನ ಕಾರ್ಯದರ್ಶಿ ಗಣೇಶ್ ಪಂಬೆಜಾಲು, ಕೋಶಾಧಿಕಾರಿ ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ, ಉಪಾಧ್ಯಕ್ಷ ಗೋಪಣ್ಣ ಗೌಡ ಪಂಬೆಜಾಲು, ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕಕ್ಕೂರು, ಕೋಶಾಧಿಕಾರಿ ದಿನೇಶ್ ಪಂಬೆಜಾಲು, ಜೊತೆಕಾರ್ಯದರ್ಶಿಗಳಾದ ಲಿಂಗಪ್ಪ ಗೌಡ ಕಕ್ಕೂರು, ಯತೀಶ್ ಕುಲಾಲ್ ಕೋರ್ಮಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸಮಿತಿ, ಉಪಸಮಿತಿಗಳ ಸಂಚಾಲಕರು, ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.