ನಿಡ್ಪಳ್ಳಿ : ಗಾಳಿ ಮಳೆಗೆ ಮರ, ವಿದ್ಯುತ್ ಕಂಬ ಬಿದ್ದು ರಸ್ತೆ ಬಂದ್- ದುರಸ್ಥಿ ಬಳಿಕ ಯಥಾಸ್ಥಿತಿ

0

ನಿಡ್ಪಳ್ಳಿ : ಇಲ್ಲಿಯ ಪಳಂಬೆ ಕುಡ್ಚಿಲ ರಸ್ತೆಯ ಪಳಂಬೆ ಎಂಬಲ್ಲಿ ಮೇ.26ರಂದು ಬೆಳಿಗ್ಗೆ ಬೀಸಿದ ಬಾರಿ ಗಾಳಿ ಮಳೆಗೆ ರಸ್ತೆ ಮೇಲೆ ಅಡ್ಡಲಾಗಿ ಮರ ಮುರಿದು ಬಿದ್ದು ರಸ್ತೆ ಬಂದ್ ಆದ ಘಟನೆ ನಡೆದಿದೆ.

 ಮರ ವಿದ್ಯುತ್‌ ಕಂಬಕ್ಕೆ ಬಿದ್ದ ಪರಿಣಾಮ 3 ವಿದ್ಯುತ್ ಕಂಬಗಳು ಬಿದ್ದು ನಷ್ಟ ಸಂಭವಿಸಿದೆ.ಮರ ಬಿದ್ದ ಕಾರಣ ರಸ್ತೆಯಲ್ಲಿ ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಯಿತು. ನಂತರ ಕ್ರೇನ್ ಮೂಲಕ ಮರ ತೆರವುಗೊಳಿಸಿ ರಸ್ತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ವಿದ್ಯುತ್ ಲೈನ್ ದುರಸ್ತಿ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಂಡಿತು.

LEAVE A REPLY

Please enter your comment!
Please enter your name here