





ಪುತ್ತೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅರಿಯಡ್ಕ ಗ್ರಾಮದಲ್ಲೂ ಹಲವು ಕಡೆಗಳಲ್ಲಿ ಹಾನಿಯುಂಟಾದ ಬಗ್ಗೆ ವರದಿಯಾಗಿದ್ದು ಮಾಡ್ನೂರು ಗ್ರಾಮದ ಪರನೀರು ಸಸ್ಪೇಟಿ ರಸ್ತೆಗೆ ಗುಡ್ಡ ಜರಿದುಬಿದ್ದು ರಸ್ತೆ ಬಂದ್ ಆಗ ಘಟನೆ ನಡೆದಿದೆ.


ಸ್ಥಳಕ್ಕೆ ಗ್ರಾಪಂ ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು, ಕಾರ್ಯದರ್ಶಿ ವಿದ್ಯಾಧರ್, ಸಿಬ್ಬಂದಿ ಶಶಿಕುಮಾರ್ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ರಸ್ತೆಗೆ ಬಿದ್ದ ಮಣ್ಣನ್ನು ಕೂಡಲೇ ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಪಂಚಾಯತ್ಗೆ ತಿಳಿಸಿದ್ದೇನೆ ಎಂದು ಮೋನಪ್ಪ ಪೂಜಾರಿ ತಿಳಿಸಿದ್ದಾರೆ.















