ಪುತ್ತೂರು: ಸುಮಾರು 40 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದ ಇಲ್ಲಿನ ಬೀರಮಲೆ ಬೈಪಾಸ್ ನಿವಾಸಿ ಕೆ.ರಾಮ ಮೂಲ್ಯ (ವ.83) ಇವರ ಶ್ರದ್ಧಾಂಜಲಿ ಕಾರ್ಯಕ್ರಮ ಮೇ.26 ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಭಾಂಗಣದಲ್ಲಿ ನೆರವೇರಿತು.
1960 ರಲ್ಲಿ ಕೋರ್ಟುರಸ್ತೆಯಲ್ಲಿ ಕಾರ್ಯಚರಿಸುತ್ತಿದ್ದ ಡಾ.ರಾಮಕೃಷ್ಣ ಸದಂಗಾಯರವರ ಚಿಕಿತ್ಸಾಲಯದಲ್ಲಿ ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ರಾಮ ಮೂಲ್ಯರು , ಆ ಬಳಿಕ ಕೆಲಸ ತೊರೆದು ಚಾಲಕರಾಗಿ ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತ ಸುಮಾರು 40 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯ ಬಲು ದೊಡ್ಡ ಅಭಿಮಾನಿಯಾಗಿದ್ದು , ತನ್ನ ಜೀವನದ ಕೊನೆಯವರೆಗೂ ಸುದ್ದಿ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದವರು ರಾಮ ಮೂಲ್ಯರು.
ನಿವೃತ್ತ ತಹಶೀಲ್ದಾರ್ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕರೂ ಆದ ಬಿ.ಎಸ್ ಕುಲಾಲ್ ಅಗಲಿದ ರಾಮ ಮೂಲ್ಯರ ಗುಣಗಾನ ಮಾಡಿ , ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು , ನಮಿಸಿದರು.

ನ್ಯಾಯವಾದಿ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಎಂ ಪೆರುವಾಯಿ , ನಿರ್ದೇಶಕ ಗಣೇಶ್ , ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜನಾರ್ಧನ ಮೂಲ್ಯ , ಕುಲಾಲ್ ಸಂಘದ ಅಧ್ಯಕ್ಷ ಶೇಷಪ್ಪ ಕುಲಾಲ್ , ನಿವೃತ್ತ ಫಾರೆಸ್ಟರ್ ಕೃಷ್ಣಪ್ಪ ಹಾಗೂ ಸಿಡ್ಕೋ ಅಧ್ಯಕ್ಷ ರವೀಂದ್ರನ್ , ರಾಮ ಮೂಲ್ಯರ ಮಕ್ಕಳಾದ ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಶಿವಪ್ರಸಾದ್ , ಸೊಸೆ ವನಿತಾ ಶಿವಪ್ರಸಾದ್ ಹಾಗೂ ಮೊಮ್ಮಗಳಾದ ಮೋಕ್ಷಿತಾ , ಮಗಳು ನಿರ್ಮಲಾ ವಿಶ್ವನಾಥ್ ಮತ್ತು ಅಳಿಯ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿರುವ ವಿಶ್ವನಾಥ್ ಸೋಮೆಶ್ವರ ಹಾಗೂ ಮೊಮ್ಮಕ್ಕಳಾದ ಪ್ರತೀಕ್ಷಾ ,ನಿರೀಕ್ಷಾ , ಸೊಸೆ ಲಕ್ಷ್ಮೀ ಗಣೇಶ್ ಬಂಟ್ವಾಳ ಮತ್ತು ಕೀರ್ತಿ ಬಂಟ್ವಾಳ , ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸಂತೋ಼ಷ್ ಕುಮಾರ್ , ಸೊಸೆ ಅನುಪಮ ಸಂತೋಷ್ ಹಾಗೂ ಮೊಮ್ಮಗ ವಿಹಾನ್ , ರಾಮ ಮೂಲ್ಯರ ಕಿರಿಯ ಸಹೋದರರಾದ ಬಿ ಎಸ್ ಎನ್ ಎಲ್ ನಿವೃತ್ತ ಉದ್ಯೋಗಿ ಶಿವಪ್ಪ ಮೂಲ್ಯ ಮತ್ತು ಪತ್ನಿ ಯಶೋಧ ಶಿವಪ್ಪ , ವೆನ್ಲಾಕ್ ಆಸ್ಪತ್ರೆಯಲ್ಲಿ ಮೆಡಿಕಲ್ ರೆಕಾರ್ಡ್ ಆಫೀಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಮೋನಪ್ಪ ಮೂಲ್ಯ ಮತ್ತು ಕಿರಿಯ ಸಹೋದರಿ ಲೀಲಾವತಿ ಸಹಿತ ಹಲವರು ಸ್ನೇಹಿತರು , ಹಿತೈಷಿಗಳು ಮತ್ತು ಕುಟುಂಬಸ್ಥರು ಹಾಜರಿದ್ದರು.
ಮೌನ ಪ್ರಾರ್ಥನೆ ,ಪುಷ್ಪಾರ್ಚನೆ :
ಮೃತರ ಗೌರವಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ನೆರವೇರಿಸಿ , ಬಳಿಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ,ಶ್ರದ್ಧಾಂಜಲಿ ಅರ್ಪಿಸಿದರು.