ಶಾರ್ಪ್ ಶೂಟರ್ಸ್ ಎಫ್.ಸಿ ಚಾಂಪಿಯನ್ಸ್, ಜೆನ್ ಝೀ ಸ್ಟ್ರೈಕರ್ಸ್ ರನ್ನರ್ಸ್
ಫುಟ್ಬಾಲ್ ಪಂದ್ಯಾಟದಲ್ಲಿ ನಮಗೆ ಬಹಳಷ್ಟು ಪಾಠವಿದೆ-ಮೂನಿಶ್ ಅಲಿ
ಪುತ್ತೂರು: ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಮರ್ಹೂಮ್ ಆಶಿರ್ ಅಪ್ಪು ಸ್ಮರಣಾರ್ಥವಾಗಿ ಕಲ್ಲರ್ಪೆ ಮೈದಾನದಲ್ಲಿ ಮೂರನೇ ಆವೃತ್ತಿಯ ಫುಟ್ಬಾಲ್ ಪಂದ್ಯಾಟ ನಡೆಯಿತು. ಊರಿನ ಆಯ್ದ ಐದು ತಂಡಗಳ ನಡುವೆ ನಡೆದ ಪಂದ್ಯಾವಳಿಯ ಚಾಂಪಿಯನ್ಸ್ ಆಗಿ ಮಹಮ್ಮದ್ ನೀರ್ಕಜೆ ಮಾಲಕತ್ವದ ಶಾರ್ಪ್ ಶೂಟರ್ಸ್ ಎಫ್.ಸಿ ಹಾಗೂ ರನ್ಸರ್ಸ್ ಆಗಿ ಅಝೀಝ್ ಕಲ್ಲರ್ಪೆ ಹಾಗೂ ಸವಾದ್ ಕಲ್ಲರ್ಪೆ ಮಾಲಕತ್ವದ ಜೆನ್ ಝೀ ಸ್ಟ್ರೈಕರ್ಸ್ ಹೊರಹೊಮ್ಮಿತು. ಮ್ಯಾನ್ ಆಫ್ ದ ಟೂರ್ನಮೆಂಟ್ ಆಗಿ ಸಹದ್ ಕಲ್ಲರ್ಪೆ, ಬೆಸ್ಟ್ ಪ್ಲೇ ಮೇಕರ್ ಆಗಿ ಆಸಿಫ್ ಕಲ್ಲರ್ಪೆ, ಬೆಸ್ಟ್ ಗೋಲ್ ಕೀಪರ್ ಆಗಿ ಮುಬಶ್ಶಿರ್ ಕಲ್ಲರ್ಪೆ, ಬೆಸ್ಟ್ ಡಿಫೆಂಡರ್ ಆಗಿ ಹಯಾಝ್ ಕಲ್ಲರ್ಪೆ ಹಾಗೂ ಬೆಸ್ಟ್ ಸ್ಟ್ರೈಕರ್ ಆಗಿ ಜುನೈದ್ ಆಯ್ಕೆಯಾದರು. ಪಂದ್ಯಾಟದ ವಿಜಯಿಗಳಿಗೆ ಟ್ರೋಫಿ ನೀಡಿ ಅಭಿನಂದಿಸಲಾಯಿತು.

ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟ್ವಾಳ ಪುರಸಭೆ ಸದಸ್ಯ ಹಾಗೂ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಶ್ ಅಲಿ ಬಂಟ್ವಾಳ ಮಾತನಾಡಿ ಫುಟ್ಬಾಲ್ ಪಂದ್ಯಾಟವು ಜಯ ಸಾಧಿಸಬೇಕೆಂದು ಗುರಿಯೆಡೆಗೆ ಆ ಚೆಂಡನ್ನು ಛಲದಿಂದ ಮುನ್ನುಗ್ಗಿಸಿ ಹೋರಾಟ ನಡೆಸುವ ಪಂದ್ಯಾಟವಾಗಿದ್ದು ಇದರಲ್ಲಿ ನಮಗೆ ಬಹಳಷ್ಟು ಪಾಠಗಳಿವೆ ಹಾಗೂ ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಯುವಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದರು. ಹಂಟ್ಯಾರು ಸರಕಾರಿ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಬಾಬು ಮರಿಕೆಯವರು ಮಾತನಾಡಿ ಕ್ರೀಡೆಯಲ್ಲಿರುವ ಯುವಕರ ಈ ಹುಮ್ಮಸ್ಸು ಮುಂದಿನ ದಿನಗಳಲ್ಲಿ ಈ ಊರಿನ ಪ್ರತಿನಿಧಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಹಾರೈಸಿದರು. ಉದ್ಯಮಿ ಫಾರೂಕ್ ಸಂಟ್ಯಾರ್ ಮಾತನಾಡಿ ಯುವಕರ ಕ್ರೀಡಾ ಸಂಭಂದಿತ ಎಲ್ಲಾ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಕಾರವನ್ನು ವ್ಯಕ್ತಪಡಿಸಿ ಪಂದ್ಯಾಟ ಆಯೋಜಿಸಿದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.
ಯುಕೆಎಫ್‌ಸಿ ಸದಸ್ಯ ಸಂತ ಫಿಲೋಮಿನಾ ಫ್ರೌಢಶಾಲಾ ವಿಭಾಗದ ಫುಟ್ಬಾಲ್ ತಂಡದ ನಾಯಕನಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಹಮ್ಮದ್ ದಾನಿಶ್‌ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ತೀರ್ಪುಗಾರರಾಗಿ ಆಗಮಿಸಿ ಸಹಕರಿಸಿದ ರಕ್ಷಿತ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಊರಿನ ಪ್ರತಿಭಾವಂತ ವೀಡಿಯೋ& ಫೊಟೋಗ್ರಫಿ ಎಡಿಟರ್ಸ್ ವಿದ್ಯಾರ್ಥಿಗಳಾದ ಶಹಝಾದ್ ಸಂಟ್ಯಾರ್, ಸಹೀದ್ ಮಲಾರ್, ಫರ್ಹಾನ್ ಸಂಟ್ಯಾರ್ ಹಾಗೂ ಹರ್ಶಿಲ್ ಸಂಟ್ಯಾರ್ ರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಕಾಂಗ್ರೆಸ್ ಆರ್ಯಾಪು ವಲಯ ಅಧ್ಯಕ್ಷರಾದ ಗಿರೀಶ್ ರೈ ಕೈಕಾರ , ಎಸ್‌ಡಿಪಿಐ ಕುಂಬ್ರ ಬ್ಲಾಕ್ ಉಪಾಧ್ಯಕ್ಷರಾದ ಅಶ್ರಫ್ ಎಚ್.ಇ, ಉದ್ಯಮಿಗಳಾದ ಅಬೂಬಕ್ಕರ್ ಕಲ್ಲರ್ಪೆ, ನಿಸಾರ್ ಸಂಪ್ಯ, ಹಮೀದ್ ಕಲ್ಲರ್ಪೆ, ಪಂದ್ಯಾವಳಿಯ ನಿರ್ದೇಶಕರಾದ ಸಮೀರ್ ಚಾಂದ್ ಸಂಟ್ಯಾರ್, ತಂಡಗಳ ಮಾಲಕರಾದ ಬಶೀರ್ ಸಂಟ್ಯಾರ್, ನಿಶಾದ್ ಮಲಾರ್, ನಾಸಿರ್ ನೀರ್ಕಜೆ ಉಪಸ್ಥಿತರಿದ್ದರು. ರಿಯಾಝ್ ಬಳಕ್ಕ ಸ್ವಾಗತಿಸಿ ವಂದಿಸಿದರು.