





ಕಡಬ: ಹೋಂಡಾ ದ್ವಿಚಕ್ರ ಹಾಗೂ ಬೊಲೆರೋ ನಡುವೆ ಡಿಕ್ಕಿಯಾಗಿ ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಮೇ.25ರಂದು ಸಂಜೆ ಬಿಳಿನೆಲೆಯಲ್ಲಿ ನಡೆದಿದೆ.


ಬಿಳಿನೆಲೆ ಕಳಿಗೆ ನಿವಾಸಿ ಸತೀಶ ಎಂಬವರ ಪತ್ನಿ ರೇಖಾ ಗಾಯಗೊಂಡವರು. ಇವರು ಬಿಳಿನೆಲೆಯಿಂದ ಅವರ ಹೋಂಡಾ ದ್ವಿಚಕ್ರ (ಕೆಎ21, ಇಇ 7248) ವಾಹನದಲ್ಲಿ ಮನೆ ಕಡೆಗೆ ಹೋಗುತ್ತಿದ್ದವರು ಬಿಳಿನೆಲೆ ಗ್ರಾಮದ ಕೈಕಂಬ ಕೋಟೆ ಸಾರು ಸೇತುವೆ ದಾಟಿ ಮುಂದೆ ಹೋಗುತ್ತಿದ್ದಂತೆ ಸುಬ್ರಹ್ಮಣ್ಯ ಕಡೆಯಿಂದ ಅಕ್ಷತ್ ಶೆಟ್ಟಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೊಲೆರೋ ವಾಹನ (ಕೆಎ 03, ಎಇ 7248) ಡಿಕ್ಕಿಯಾಗಿದೆ. ಘಟನೆಯಲ್ಲಿ ರೇಖಾ ಅವರು ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಸಂತೋಷ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.













