ಕುಂಬ್ರ: ಕೌಡಿಚ್ಚಾರಿನಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲದೆ ಸುತ್ತಮುತ್ತಲಿನ ಪರಿಸರದ ವರ್ತಕರು, ಸ್ಥಳೀಯ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ಕೌಡಿಚ್ಚಾರಿನಲ್ಲಿ ಅಗತ್ಯವಾಗಿ ಮೆಸ್ಕಾಂ ಇಲಾಖೆಯ ಒಂದು ಟಿಸಿಎಂ ಅಳವಡಿಸುವಂತೆ ಮತ್ತು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವ ಕಾರಣ ಪುತ್ತೂರಿನ ಶಾಸಕರು ಹಾಗೂ ಮೆಸ್ಕಾಂ ಇಲಾಖೆ ಶೀಘ್ರ ಸ್ಪಂದಿಸುವಂತೆ ಸ್ಥಳೀಯ ನಿವಾಸಿಗಳು ಹಾಗೂ ಕೌಡಿಚ್ಚಾರಿನ ವಿದ್ಯುತ್ ಬಳಕೆದಾರರ ಅಧ್ಯಕ್ಷರಾದ ಎನ್. ಅಬೂಬಕ್ಕರ್ ಕೌಡಿಚ್ಚಾರು ಆಗ್ರಹಿಸಿದ್ದಾರೆ.