





ಪುತ್ತೂರು: ಸುಪ್ರಸಿದ್ಧ ಗಾಯಕರು, ಸಂಗೀತ ಗುರುಗಳು ಡಾ.ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ನಾಡಿನ ಸುಪ್ರಸಿದ್ಧ ಸಂಗೀತ ಸಂಸ್ಥೆ ಗಾನಸಿರಿ ಕಲಾಕೇಂದ್ರ (ರಿ) ಪುತ್ತೂರು ಇದರ ಪುತ್ತೂರು ಪ್ರಧಾನ ಶಾಖೆ, ರಾಮಕುಂಜ, ಕುಟ್ರುಪಾಡಿ , ನೆಟ್ಟಣ, ಸುಳ್ಯ, ಉಪ್ಪಿನಂಗಡಿ, ಮಡಂತ್ಯಾರ್ ಶಾಖೆಗಳಲ್ಲಿ ಸುಗಮ ಸಂಗೀತ, ಭಜನ್ಸ್ ,ತಬಲಾ ಮತ್ತು ಡ್ರಾಯಿಂಗ್ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಕಳೆದ 23 ವರ್ಷಗಳಲ್ಲಿ ದಾಖಲೆಯ 38 ಸಾವಿರ ವಿದ್ಯಾರ್ಥಿಗಳಿಗೆ ಗಾಯನ ತರಬೇತಿ ನೀಡಿರುವ ನಾಡಿನ ಅತಿ ದೊಡ್ಡ ಸುಗಮ ಸಂಗೀತ ಸಂಸ್ಥೆ ಗಾನಸಿರಿಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ತರಬೇತಿ ನೀಡುವುದಲ್ಲದೆ ಸಂಗೀತ ಕ್ಷೇತ್ರದಲ್ಲಿ ಬೆಳೆಯಲು ಮತ್ತು ಬೆಳಗಲು ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುತ್ತಿರುವುದು ಇಲ್ಲಿನ ವಿಶೇಷ. ಇದರ ಫಲ ಶ್ರುತಿಯಾಗಿ ಈಗಾಗಲೇ ಸಂಸ್ಥೆಯಲ್ಲಿ ತರಬೇತಿ ಪಡೆದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಡಿನ ವಿವಿಧ ಟಿವಿ ಚಾನೆಲ್ ಗಳಲ್ಲಿ, ಪ್ರತಿಷ್ಠಿತ ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ ಮತ್ತು ಇಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಸಂಗೀತವನ್ನೇ ವೃತ್ತಿಯನ್ನಾಗಿಸುವಷ್ಟು ಪ್ರಬುದ್ಧತೆಯನ್ನು ಪಡೆದಿರುತ್ತಾರೆ.


ದೂರದ ಊರುಗಳಲ್ಲಿರುವ ಮತ್ತು ಅನಿವಾರ್ಯ ಕಾರಣದಿಂದ ನಮ್ಮ ಶಾಖೆಗಳಿಗೆ ಬಂದು ಕಲಿಯಲು ಸಾಧ್ಯವಿಲ್ಲದವರಿಗಾಗಿ ಅತ್ಯುತ್ತಮ ಗುಣಮಟ್ಟದ ಆನ್ ಲೈನ್ ತರಗತಿಗಳೂ ಲಭ್ಯವಿದೆ.





ನಾಡಿನ ಶ್ರೇಷ್ಠ ಸಂಗೀತ ಸಂಸ್ಥೆಗಳಲ್ಲೊಂದಾದ ಗಾನಸಿರಿಯಲ್ಲಿ ಗಾಯನ ತರಬೇತಿ ಪಡೆದು ಉತ್ತಮ ಗಾಯಕ ಗಾಯಕಿಯರಾಗುವ ಕನಸು ಕಾಣುವ ಮನಸುಗಳು ದಾಖಲಾತಿಗಾಗಿ 9901555893 ಸಂಖ್ಯೆಯಲ್ಲಿ ಡಾ.ಕಿರಣ್ ಕುಮಾರ್ ಗಾನಸಿರಿ ಇವರನ್ನು ಸಂಪರ್ಕಿಸಲು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.






