
ಪುತ್ತೂರು:‘ಬಲವರ್ದಿತ ಆಹಾರದಿಂದ ಅತೀ ರಕ್ತದೊತ್ತಡವನ್ನು ನಿಯಂತ್ರಿಸುವ’ ಬಗ್ಗೆ ಪ್ರಬಂಧ ಮಂಡಿಸಿ ನಿಟ್ಟೆ ವಿಶ್ವವಿದ್ಯಾನಿಲಯದಿಂದ ನಿಶಿತ್ ಕುಮಾರ್ ಜೋಗಿ ಅವರು ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಆಹಾರ ಸುರಕ್ಷತೆ ಹಾಗೂ ಪೋಷಣೆ ವಿಭಾಗದ ಡಾ. ಮಮತಾ ಬಿ ಎಸ್ ಇವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.
ಡಾ. ನಿಶಿತ್ ಕುಮಾರ್ ಜೋಗಿ ಸರ್ಕಾರಿ ಪಿಯು ಕಾಲೇಜು ಬೆಳಿಯೂರುಕಟ್ಟೆ ಪುತ್ತೂರು ಇಲ್ಲಿ ಪಿಯುಸಿ ಮಾಡಿರುತ್ತಾರೆ. ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ B.SC. ಮಾಡಿರುತ್ತಾರೆ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ M.Sc. ಮುಗಿಸಿದ್ದಾರೆ. ಇವರು ಬಲ್ನಾಡು ಬೆಳಿಯೂರುಕಟ್ಟೆ ನಿವಾಸಿ ಸುರೇಂದ್ರ ಜೋಗಿ ಮತ್ತು ಹರಿಣಾಕ್ಷಿ ದಂಪತಿಯ ಪುತ್ರ.