ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ,ತಂಬಾಕು ಉಗುಳಿದರೆ ರೂ.1000 ದಂಡ

0

ಬೆಂಗಳೂರು:ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳುವುದನ್ನು ನಿಷೇಧಿಸಿ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು,ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಮತ್ತು ಗುಟ್ಕಾ ಉಗುಳಿದರೆ ರೂ.1,000 ದಂಡ ವಿಧಿಸಬಹುದಾಗಿದೆ.


ಈ ಸಂಬಂಧ ರಾಜ್ಯ ಸರ್ಕಾರವು ರೂಪಿಸಿದ್ದ,‘ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ(ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ವಿತರಣೆಯ ವಿನಿಮಯ)(ಕರ್ನಾಟಕ ತಿದ್ದುಪಡಿ)ಮಸೂದೆ-2024’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ.23ರಂದು ಅಂಕಿತ ಹಾಕಿದ್ದರು.ಮೇ 30ರಂದು ಈ ಸಂಬಂಧ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ, ಕಾಯ್ದೆಯನ್ನು ಜಾರಿಗೆ ತರಲಾಗಿದೆ.


21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೀಡಿ,ಸಿಗರೇಟು ಮತ್ತು ತಂಬಾಕಿನ ಉತ್ಪನ್ನಗಳ ಮಾರಾಟವನ್ನು ಈ ಕಾಯ್ದೆ ನಿಷೇಧಿಸುತ್ತದೆ.ಉಲ್ಲಂಸಿದವರಿಗೆ ರೂ.1,೦೦೦ ದಂಡ ವಿಧಿಸಬಹುದಾಗಿದೆ.ಉಪಹಾರ ಗೃಹ, ಪಬ್, ಬಾರ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವೆನೆಗೆ ಅವಕಾಶ ನೀಡುವುದನ್ನೂ ಈ ಕಾಯ್ದೆ ನಿಷೇಧಿಸುತ್ತದೆ.ಈ ನಿಷೇಧವನ್ನು ಉಲ್ಲಂಸಿದವರಿಗೆ ರೂ.5೦,೦೦೦ದಿಂದ ರೂ.1 ಲಕ್ಷದವರೆಗೆ ದಂಡ ಮತ್ತು ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

LEAVE A REPLY

Please enter your comment!
Please enter your name here