ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಮೇ.31ರಂದು ಬೇಲೂರು ತಾಲೂಕಿನ ಅಂಕಿ ಹಳ್ಳಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಭೇಟಿ ನೀಡಿದರು. ಸಹಕಾರ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಂಘದ ಅಧ್ಯಕ್ಷರು ಸುಧಾಕರ್ ಶೆಟ್ಟಿ ಬೀಡಿನಮಜಲುರವರು ಸಂಘ ನಡೆದು ಬಂದ ಹಾದಿ ಹಾಗೂ ಸಂಘದ ಅಭಿವೃದ್ಧಿಯ ಬಗ್ಗೆ ವಿವರಿಸಿದರು. ಉಪಾಧ್ಯಕ್ಷರಾದ ಎನ್. ರಾಮ ಭಟ್ , ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ನಾಯ್ಕ ಯಸ್. ಸ್ವಾಗತಿಸಿದರು, ಶಾಖಾ ವ್ಯವಸ್ಥಾಪಕ ರವೀಂದ್ರ ಮೆಲಾಂಟ ವಂದಿಸಿದರು.
Home  Uncategorized  ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಬೇಲೂರು ತಾಲೂಕಿನ ಅಂಕಿ ಹಳ್ಳಿ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು...
