





ಪುತ್ತೂರು: ಮೂಡಬಿದ್ರೆ ಆಳ್ವಾಸ್ ಬ್ಯಾಚರಲ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ನ ಅಂತಿಮ ವರ್ಷದ ವಿದ್ಯಾರ್ಥಿ ಬಲ್ನಾಡು ಡಾ.ಅರ್ಜುನ್ ಆಳ್ವರವರಿಗೆ ಶೈಕ್ಷಣಿಕ, ಕ್ರೀಡೆ ಹೀಗೆ ಎಲ್ಲಾ ವಿಭಾಗಗಳಲ್ಲಿನ ಸಾಧನೆಗೆ ಸ್ಪೆಷಲ್ ಔಟ್ ಸ್ಟ್ಯಾಂಡಿಂಗ್ ಅವಾರ್ಡ್(ವಿಶೇಷ ಅತ್ತ್ಯುತ್ತಮ ಪ್ರಶಸ್ತಿ) ಅನ್ನು ಬೆಂಗಳೂರು ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ಯಾಶ್ ಅವಾರ್ಡ್ ಪ್ರದಾನ ಮಾಡುವ ಮೂಲಕ ಗೌರವಿಸಲಾಗುತ್ತಿದೆ.ಪ್ರಸ್ತುತ ಡಾ.ಅರ್ಜುನ್ ಆಳ್ವರವರು ಮೂಡಬಿದ್ರೆ ಬಿ.ಎನ್.ವೈ.ಎಸ್ ಕಾಲೇಜಿನಲ್ಲಿ ಇಂಟರ್ನ್ ಶಿಪ್ ಮುಗಿಸಿ ಪ್ರಸ್ತುತ ಬೆಂಗಳೂರಿನ ಎಂ.ಆರ್.ಆರ್ ನೇಚರ್ ಕ್ಯೂರ್ ಆಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದು, ಜೂ.4 ರಂದು ಬೆಂಗಳೂರಿನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇಲ್ಲಿನ ಧವಂತರಿ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಬೆಂಗಳೂರು ವಿ.ವಿಯ ವೈಸ್ ಚಾನ್ಸಲರ್ ಡಾ.ಭಗವಾನ್ ಬಿ.ಸಿರವರಿಂದ ಕ್ಯಾಶ್ ಅವಾರ್ಡ್ ಅನ್ನು ಸ್ವೀಕರಿಸಲಿದ್ದಾರೆ.
ಡಾ.ಅರ್ಜುನ್ ಆಳ್ವರವರು ಓರ್ವ ಕಬಡ್ಡಿ ಪಟುವಾಗಿದ್ದು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇದರ ಕಬಡ್ಡಿ ತಂಡಕ್ಕೆ ಮೂಡಬಿದ್ರೆ ಆಳ್ವಾಸ್ ಬ್ಯಾಚುರಲ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದರು. ಬೆಂಗಳೂರಿನಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಇವರು ಎರಡನೇ ಬಾರಿಗೆ ವಿ.ವಿ.ತಂಡಕ್ಕೆ ಆಯ್ಕೆಯಾಗಿದ್ದರು. ಬೆಂಗಳೂರಿನ ಆದಿತ್ಯ ಇನ್ಸ್‌ಸ್ಟಿಟ್ಯೂಟ್ ಆಫ್ ಫಾರ್ಮುಸಿ ರಿಸರ್ಚ್ ಸೆಂಟರ್‌ನ ಆಶ್ರಯದಲ್ಲಿ ಅ.24ರಿಂದ 28ರ ತನಕ ತರಬೇತಿ ಶಿಬಿರ ಮುಗಿಸಿ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾನಿಲಯದಲ್ಲಿ ಅ.30-ನ.3ರ ತನಕ ನಡೆಯುವ ದಕ್ಷಿಣ ಭಾರತ ಅಂತರ್ ವಿಶ್ವ ವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅರ್ಜುನ್ ಆಳ್ವ ರಾಜೀವ ಗಾಂದಿ ಆರೋಗ್ಯ ವಿಜ್ಞಾನ ವಿ.ವಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಪುತ್ತೂರು ವಿವೇಕಾನಂದ ಪ್ರೌಢಶಾಲೆ, ಪ.ಪೂ.ಕಾಲೇಜು ಹಾಗೂ ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇಲ್ಲಿನ ಹಿರಿಯ ವಿದ್ಯಾರ್ಥಿಯಾಗಿರುವ ಡಾ.ಅರ್ಜುನ್ ಆಳ್ವ ಆಳ್ವಾಸ್ ಮೂಡಬಿದ್ರೆ ಆಳ್ವಾಸ್ ಬ್ಯಾಚುರಲ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಪದವಿ ಪಡೆದು ಪ್ರಸ್ತುತ ಆಳ್ವಾಸ್ ಮೂಡಬಿದ್ರೆ ಬಿ.ಎನ್.ವೈ.ಎಸ್ ಕಾಲೇಜಿನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ. ೨೦೨೩-೨೪ನೇ ಸಾಲಿನಲ್ಲಿ ಆಳ್ವಾಸ್‌ನಲ್ಲಿ ವಿದ್ಯಾರ್ಥಿ ಸಂಘದ ನಾಯಕನಾಗಿರುವುದಲ್ಲದೇ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತಂಡದ ಮಾಜಿ ಕಪ್ತಾನ, ಅಜಲಾಡಿ ಬೀಡು ಪ್ರವೀಣ್‌ಚಂದ್ರ ಆಳ್ವ ಮತ್ತು ಸುಮಲತಾ ದಂಪತಿ ಪುತ್ರ.











