





ಪುತ್ತೂರು: ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರದ್ಧಾ ಟ್ಯೂಷನ್ ಸೆಂಟರ್ ಜೂ.4ರಂದು ಸಂಪ್ಯದ ಅಕ್ಷಯ ಕಾಲೇಜ್ ಸಮೀಪವಿರುವ ಕಾವೇರಿ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ಬೆಳಿಗ್ಗೆ ರಾಮ ಪ್ರಸಾದ್ ಜಿ.ಕೆ ಕಲ್ಲರ್ಪೆಯವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ನಡೆಯಿತು. ಬಳಿಕ ಸಂಪ್ಯ ಶ್ರೀ ಗಣೇಶ್ ಮೆಡಿಕಲ್ಸ್’ನ ಮಾಲಕ ಶಂಕರನಾರಾಯಣ ಭಟ್ ಹಾಗೂ ಮನೆಯವರು ದೀಪ ಬೆಳಗಿಸಿ ಶುಭ ಹಾರೈಸಿದರು.


ಈ ಸಂದರ್ಭ ತಿರುಮಲೇಶ್ವರ ಭಟ್ ಕುರಿಯಾಜೆ, ಕಟ್ಟಡ ಮಾಲಕ ಭೀಮಯ್ಯ ಭಟ್, ಗೋವಿಂದ ಪ್ರಸಾದ್ ನೆ.ನಗರ, ನಾರಾಯಣ ಪಿ.ವಿ ಸಂಪ್ಯ ಹಾಗೂ ಹಲವಾರು ಮಿತ್ರರು ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.





ಸಂಸ್ಥೆಯ ಮಾಲಕಿ ಪುಷ್ಪಲತಾ ಭಟ್ ಮಲಾರ್-ನೆಕ್ಕರೆ, ಅವರ ಪತಿ ಶ್ರೀ ಗಣೇಶ್ ಮೆಡಿಕಲ್ಸ್ ಮಾಲಕ ಶಂಕರನಾರಾಯಣ ಭಟ್, ಪುತ್ರಿಯರಾದ ಶ್ರೇಯಾ ಎಸ್, ಧ್ಯೇಯಾ ಎಸ್. ಅತಿಥಿಗಳನ್ನು ಸ್ವಾಗತಿಸಿ ಸತ್ಕರಿದರು.
ನಮ್ಮಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವೈಯಕ್ತಿಕ ಗಮನ ಹರಿಸಿ ಮಿತದರದಲ್ಲಿ ಭೋದನೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9902543158ನ್ನು ಸಂಪರ್ಕಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕಿ ಪುಷ್ಪಲತಾ ಭಟ್ಟ್ ತಿಳಿಸಿದರು.








