ಜೂ. 9 : ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ 78 ನೇ ಹುಟ್ಟುಹಬ್ಬ -ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ

0

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರ 78 ನೇ ಹುಟ್ಟುಹಬ್ಬ ಆಚರಣೆ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ ಜೂ. 9 ರಂದು ವಿವಿಧ ಕಾರ್‍ಯಕ್ರಮಗಳೊಂದಿಗೆ ಜರಗಲಿದೆ.

ಬೆಳಿಗ್ಗೆ 9.30 ರಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಕಾರ್‍ಯಕ್ರಮ ನಡೆಯಲಿದ್ದು. ಸಂಸ್ಥೆಯ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈಯವರ 78 ನೇ ಹುಟ್ಟು ಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿಕೊಳ್ಳಲಾಗುವುದು, ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಮೆರವಣಿಗೆ, ವನಮಹೋತ್ಸವ, ದ್ವಿತೀಯ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here