ಮುಂಡೂರು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ :ಎಲ್.ಕೆ.ಜಿ ಯು.ಕೆ.ಜಿ ತರಗತಿ ಉದ್ಘಾಟನೆ

0

ನಿಡ್ಪಳ್ಳಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಂಡೂರು 1  ಶಾಲಾ ಪ್ರಾರಂಭೋತ್ಸವ ಜೂ.2 ರಂದು ನಡೆಯಿತು.

 ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ  ಭಾಸ್ಕರ ಕರ್ಕೆರ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ  ಸೀತಾ ಉಪಸ್ಥಿತರಿದ್ದರು. 2025-26ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊಂಡ ಎಲ್.ಕೆ.ಜಿ, ಯು.ಕೆ.ಜಿ  ತರಗತಿಗಳನ್ನು ಎಸ್. ಡಿ. ಎಂ. ಸಿ ಅಧ್ಯಕ್ಷರು ಉದ್ಘಾಟಿಸಿದರು.

ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ  ವಿದ್ಯಾರ್ಥಿಗಳನ್ನು ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಸರಕಾರದಿಂದ ನೀಡಿದ ಪಠ್ಯ ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ  ಶಾಲಾ ಮುಖ್ಯಗುರು ಆಶಾ, ಸಹ ಶಿಕ್ಷಕಿಯರು,ಅಕ್ಷರ ದಾಸೋಹ ಸಿಬ್ಬಂದಿಗಳು ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here