





ಪುತ್ತೂರು: ಮೂಡಬಿದ್ರಿ, ಸುಳ್ಯ, ಯೋಜನಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾಗಿ ಕರ್ತವ್ಯದಲ್ಲಿದ್ದು, ಇದೀಗ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಗೊಂಡು ತೆರಳುತ್ತಿರುವ ಪ್ರವೀಣ್ ರವರನ್ನು ಮಂಗಳೂರು ಪಡೀಲ್ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಜಿಲ್ಲಾ ನಗರ ಮತ್ತು ಗ್ರಾಮಾoತರ ಯೋಜನಾ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಬೀಳ್ಕೊಡಲಾಯಿತು.


ಅಧ್ಯಕ್ಷತೆ ವಹಿಸಿದ್ದ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಾಫ ಮಾತನಾಡಿ, ಜಿಲ್ಲೆಯಲ್ಲಿ 8 ವರ್ಷ ಗಳ ಸುಧೀರ್ಘ ಸೇವೆ ಸಲ್ಲಿಸಿ ಜನ ಸ್ನೇಹಿ ಅಧಿಕಾರಿ ಎನಿಸಿಕೊಂಡಿರುವ ಪ್ರವೀಣ್ ರವರ ಕಾರ್ಯ ಶೈಲಿ ಮತ್ತು ಸಾರ್ವಜನಿಕ ಸಂಬಂಧ ಇತರ ಅಧಿಕಾರಿಗಳಿಗೂ ಮಾದರಿ ಎಂದರು.





ಜಿಲ್ಲಾ ನಗರಾಭಿವೃದ್ಧಿ ಕೋಶ ಇದರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅರುಣ್. ಕೆ. ಪ್ರವೀಣ್ ರವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಟೌನ್ ಪ್ಲಾನರ್ , ಸಂತೋಷ್ ಮತ್ತು ಮೋಕ್ಷ ರಾಣಿ, ಕಚೇರಿ ಅಧೀಕ್ಷಕಿ ರೂಪಾ, ಸಿಬ್ಬಂದಿಗಳಾದ ಮಲ್ಲಿಕಾ ಉಪಸ್ಥಿತರಿದ್ದರು. ನಗರ ಯೋಜಕರಾದ ಫೈರೋಜ್ ಸ್ವಾಗತಿಸಿ ವಂದಿಸಿದರು.








