





ಕೌಡಿಚ್ಚಾರು: ರಾಜ್ಯ ಸರ್ಕಾರದ ಪಾಲು ಬಂಡವಾಳ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಇದರ ಮುಂಗಾರು ಹಂಗಾಮ ಎಂಬ ಮಳೆಗಾಲದ ಠೇವಣಿಗೆ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ನೀಡಲಾಗಿದ್ದು, ಇದರ ಕರಪತ್ರ ಬಿಡುಗಡೆ ಕಾರ್ಯಕ್ರಮ ಕೌಡಿಚ್ಚಾರು ಶಾಖೆಯಲ್ಲಿ ಜೂನ್ 5ರಂದು ನಡೆಯಿತು.ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಕರಪತ್ರವನ್ನು ಬಿಡುಗಡೆಗೊಳಿಸಿ, ಶುಭ ಹಾರೈಸಿದರು.


ಒಂದು ವರ್ಷದ ನಿರಖು ಠೇವಣಿಗೆ 10 ಶೇಕಡ ಹಾಗೂ ಚಿನ್ನಾಭರಣ ಸಾಲಕ್ಕೆ ಪ್ರತಿ ಗ್ರಾಂ ಗೆ 7777/- 100 ಕ್ಕೆ ಕೇವಲ 85 ಪೈಸೆ ಮಾತ್ರ. ಇದು ಗರಿಷ್ಠ ಸಾಲ -ಕನಿಷ್ಠ ಬಡ್ಡಿ ದರದ ಆಫರ್ ಆಗಿದೆ.






ಈ ಕಾರ್ಯಕ್ರಮದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ಶಿವಪ್ಪ ಮೂಲ್ಯ,ಕುಂಬ್ರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಂಘದ ನಿರ್ದೇಶಕ ಉಮೇಶ್ ಗೌಡ ಕನ್ನಯ್ಯ, ಸ್ಥಳೀಯ ಗ್ರಾಹಕ ಶಿವಣ್ಣಗೌಡ, ದುಗ್ಗಮ್ಮ ಉಪಸ್ಥಿತರಿದ್ದರು. ಶಾಖೆ ಸಿಬ್ಬಂದಿಗಳು ಸಹಕರಿಸಿದರು.










