
ಪ್ರತಿದಿನ ಸಂಜೆ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಟ್ಯೂಷನ್ ಕ್ಲಾಸುಗಳು ಪ್ರಾರಂಭ
ಪುತ್ತೂರು: ಪುತ್ತೂರಿನ ದೇವಣ್ಣ ಕಿಣಿ ಕಾಂಪ್ಲೆಕ್ಸ್ ನಲ್ಲಿರುವ ಇನ್ಸ್ಫೈರ್ ಲರ್ನಿಂಗ್ ಸೆಂಟರ್ ನಲ್ಲಿ ಸಿಇಟಿ/ನೀಟ್/ಜೆಇಇ ತರಬೇತಿ ತರಗತಿಗಳು ಜೂ. 15 ರಂದು ಪ್ರಾರಂಭವಾಗಲಿದೆ.
ಕಳೆದ ಐದು ವರ್ಷಗಳಿಂದ ಪುತ್ತೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿಯನ್ನು ಸಂಸ್ಥೆ ನೀಡುತ್ತಾ ಬಂದಿದೆ. ಇಲ್ಲಿ ತರಬೇತಿಯನ್ನು ಪಡೆದು ನೂರಾರು ವಿದ್ಯಾರ್ಥಿಗಳು ಬೇರೆ ಬೇರೆ ವೃತ್ತಿಪರ ಕೋರ್ಸ್ ಗಳಿಗೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ಪಿಯುಸಿ ಪರೀಕ್ಷೆ ನಂತರ ಇಂಜಿನಿಯರಿಂಗ್, ಮೆಡಿಕಲ್ ಇತ್ಯಾದಿ ವೃತ್ತಿಪರ ಕೋರ್ಸ್ ಗಳಿಗೆ ಕೆಸಿಇಟಿ/ನೀಟ್/ಜೆಇಇ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಅದರ ಜೊತೆಯಲ್ಲಿ ಪೂರಕವಾಗಿ ಕೌಶಲ್ಯಗಳನ್ನು ಬೆಳೆಸಿ ಕೊಳ್ಳಬೇಕಾಗುತ್ತದೆ. ಕೆಸಿಇಟಿ/ನೀಟ್/ಜೆಇಇ ಪರೀಕ್ಷೆಗಳನ್ನು ಎದುರಿಸಲು ಬೇಕಾದಂತಹ ಎಲ್ಲಾ ರೀತಿಯ ತರಬೇತಿಯನ್ನು, ಕೌಶಲ್ಯವನ್ನು ಈ ಸಂಸ್ಥೆಯಲ್ಲಿ ನೀಡಲಾಗುತ್ತದೆ. ಇನ್ಸ್ಫೈರ್ ಲರ್ನಿಂಗ್ ಸೆಂಟರ್ ನಲ್ಲಿ ಪುತ್ತೂರು, ಮಂಗಳೂರು, ಕಾರ್ಕಳ ಹಾಗೂ ಮೂಡಬಿದ್ರೆ ಕಾಲೇಜುಗಳ ನುರಿತ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ.
ಜೂ.15 ರಿಂದ ಪ್ರತಿ ಆದಿತ್ಯವಾರ ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ತರಗತಿಗಳು ನಡೆಯುತ್ತವೆ. ಪ್ರತಿ ಬುಧವಾರ ಮತ್ತು ಶುಕ್ರವಾರ ಸಂಜೆ 4.30 ರಿಂದ 5.30 ರ ವರೆಗೆ ಪ್ರಾಕ್ಟೀಸ್ ಟೆಸ್ಟ್ ಗಳನ್ನು ಇಲ್ಲಿ ಸೇರಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪ್ರತಿ ವಾರ ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಲಾಗುತ್ತದೆ.
ಇನ್ಸ್ಪೈರ್ ಲರ್ನಿಗ್ ಸೆಂಟರ್ ನಲ್ಲಿ ಪ್ರತಿ ದಿನ ಸಂಜೆ 5 ರಿಂದ 7 ಗಂಟೆ ವರೆಗೆ 8ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಎಲ್ಲಾ ವಿಷಯಗಳಿಗೆ ಟ್ಯೂಷನ್ ಕೊಡಲಾಗುತ್ತದೆ. ಕೆಲವೇ ಸೀಟುಗಳು ಬಾಕಿ ಇದ್ದು ಆಸಕ್ತ ವಿದ್ಯಾರ್ಥಿಗಳು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸಬೇಕಾಗಿ ಸಂಸ್ಥೆಯ ಮುಖ್ಯಸ್ಥರು ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ..
Inspire Learning Centre
Devanna kini complex
Near- Union Bank
Puttur. Mob-6362568637,
+91 73493 07261.