ಸ್ಪರ್ಧಾತ್ಮಕ ಬೆಲೆಗೆ ಪೋರ್ಟೇಬಲ್ ಜನರೇಟರ್‌ಗಳ ಮಾರಾಟ-ಸರ್ವಿಸಸ್

0

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಜನರೇಟರ್ ಪ್ರಮುಖ ಬಳಕೆಯ ಹಾಗೂ ತುರ್ತು ಸಂದರ್ಭಗಳಲ್ಲಿ ಬ್ಯಾಕ್‌ಅಪ್ ವಿದ್ಯುತ್ ಮೂಲವಾಗಿದೆ. ತುರ್ತು ಸಮಯದಲ್ಲಿ ಮನೆ ಬೆಳಗಿಸುವ ಸಾಧನವೂ ಇದಾಗಿದೆ. ಮಳೆಗಾಲದಲ್ಲಂತೂ ಕೆಲವು ಮನೆಗಳು ಕತ್ತಲೆಯಲ್ಲಿ ಕಾಲ ಕಲೆಯುವ ಪರಿಸ್ಥಿತಿ. ವಿದ್ಯುತ್ ಕಡಿತ ಅಥವಾ ಪವರ್ ಕಟ್ ಸಮಸ್ಯೆಗಳನ್ನು ವಿಪರೀತವಾಗಿ ಎದುರಿಸುತ್ತಿದ್ದು, ಮನೆಗೊಂದು ಜನರೇಟರ್ ಖರೀದಿಸಬಾರದೇ ಎಂದು ಮಹಿಳೆಯರು ಗಂಡಂದಿರಿಗೆ ಒತ್ತಾಯಿಸುದುಂಟು. ಆದರೆ, ದುಬಾರಿ ದುನಿಯಾದಲ್ಲಿ ಮಧ್ಯಮ ವರ್ಗದ ಜನರು, ಬಡವರು ಯಂತ್ರಗಳ ಬೆಲೆ ನೋಡಿದಾಗ ಖರೀದಿಗೆ ಹಿಂದೇಟು ಹಾಕುತ್ತಾರೆ. ಇಂತಹವರಿಗೆ ಶ್ರೀನಿಧಿ ಆಗ್ರೋ ಸರ್ವಿಸಸ್ ಉಪಕಾರಿಯಾಗಿದೆ.

ಹೌದು, ಶ್ರೀನಿಧಿ ಆಗ್ರೋ ಸರ್ವಿಸಸ್‌ನಲ್ಲಿ ಬ್ರಾಂಡೆಡ್ ಕಂಪನಿಯ ಉನ್ನತ ಮಟ್ಟದ ಪೋಟೇಬಲ್ ಜನರೇಟರ್‌ಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಾಗುತ್ತಿದೆ. ಇಲ್ಲಿ 1 ಕೆವಿಯಿಂದ 10 ಕೆವಿ ವರೆಗಿನ ಜನರೇಟರ್‌ಗಳು ಲಭ್ಯವಿದೆ. ಜನರೇಟರ್‌ಗಳ ಪ್ರಾರಂಭಿಕ ಬೆಲೆ 20 ಸಾವಿರ ರೂಪಾಯಿ ಆಗಿದ್ದು, 3 ಲಕ್ಷ ರೂ. ವರೆಗಿನ ಜನರೇಟರ್‌ಗಳು (ವಾಣಿಜ್ಯ ಬಳಕೆಯ ಜನರೇಟರ್‌ಗಳು) ಲಭ್ಯವಿದೆ. ಅಲ್ಲದೆ, ಜನರೇಟರ್‌ಗಳ ಮಾರಾಟದ ಜೊತೆಗೆ ಸರ್ವಿಸ್ ಕೂಡ ನೀಡಲಾಗುತ್ತದೆ ಎಂದು ಈಶ್ವರ ಭಟ್ ಕಂಬಳಿ ಮೂಲೆ ಹಾಗೂ ಶ್ರೀನಿಧಿ ಬೋರ್‌ವೆಲ್ಸ್‌ನ ಪಿ.ಗೋಪಾಲ ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 40 ವರ್ಷಗಳ ಅನುಭವ ಹೊಂದಿರುವ ಈ ಶ್ರೀನಿಧಿ ಆಗ್ರೋ ಸರ್ವಿಸಸ್‌ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಅಷ್ಟೇ ಅಲ್ಲದೆ, ರಾಜ್ಯಕ್ಕೆ ದಾಸ್ತಾನು ಮತ್ತು ವಿತರಕವೂ ಆಗಿದೆ.
ವಿದ್ಯುತ್ ಕಡಿತದ ಸಮಯದಲ್ಲಿ ಮನೆ ಬೆಳಗಿಸಲು ಮಾತ್ರವಲ್ಲದೆ, ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಮನೆಯ ಹೊರಾಂಗಣದಲ್ಲಿ ಆಯೋಜಿಸಿದಾಗ ವಿದ್ಯುತ್ ಅಗತ್ಯವಿದ್ದರೆ ಪೋರ್ಟೇಬಲ್ ಜನರೇಟರ್‌ಗಳು ಸೂಕ್ತವಾಗಿದೆ. ಇದು ದೀಪಗಳು, ಸ್ಟೌವ್, ಗ್ರಿಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಗೆ ವಿದ್ಯುತ್ ಒದಗಿಸುತ್ತದೆ. ಪೋರ್ಟೇಬಲ್ ಜನರೇಟರ್‌ಗಳು ಹಗುರವಾಗಿದ್ದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಲು ಸುಲಭವಾಗಿದೆ. ಸಣ್ಣ ವ್ಯವಹಾರದಿಂದ ಪ್ರಾರಂಭಿಸಿ ದೊಡ್ಡ ಮಟ್ಟದ ಉದ್ಯಮಕ್ಕೆ ವಿದ್ಯುತ್ ಕಡಿತವಾಗಿ ಸೇವೆಗೆ ಅಡ್ಡಿಯಾಗಿ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಜನರೇಟರ್‌ಗಳು ಉಪಕಾರಿಯಾಗಿದೆ.

ನೀವು ಕೃಷಿಕರಾಗಿದ್ದರೆ ಅಥವಾ ಹೈನುಗಾರರಾಗಿದ್ದರೆ ಜನರೇಟರ್‌ಗಳು ಉಪಕಾರಿಯಾಗಿದೆ. ನೀರಾವರಿ ವ್ಯವಸ್ಥೆ, ಕೊಟ್ಟಿಗೆ, ಹಾಲು ಕರೆಯುವ ಯಂತ್ರ ಮತ್ತು ಇತರೆ ಕೃಷಿ ಉಪಕರಣಗಳಿಗೆ ವಿದ್ಯುತ್ ಒದಗಿಸಲು ಇದು ಸಹಕಾರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ 9844000722,7760851556,9986794955 ಗೆ ಸಂಪರ್ಕಿಸಿ

LEAVE A REPLY

Please enter your comment!
Please enter your name here