ಉಪ್ಪಿನಂಗಡಿ: ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲಾ 2025-26ನೇ ಸಾಲಿನ ಮಂತ್ರಿಮಂಡಲ ರಚನೆ ಮಾಡಲಾಯಿತು.
ಚುನಾವಣೆ ಮೂಲಕ ಶಾಲಾ ನಾಯಕ ಹಾಗೂ ಉಪನಾಯಕನ ಆಯ್ಕೆ ನಡೆಯಿತು. 7ನೇ ತರಗತಿಯ ತಶ್ವಿನ್ ನಾಯಕನಾಗಿ, ಮೊಹಮ್ಮದ್ ಯಾಸೀನ್ ಉಪನಾಯಕನಾಗಿ ಹಾಗೂ ಸನ್ನಿಧಿ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಗೊಂಡರು. ಉಳಿದಂತೆ ಗೃಹಮಂತ್ರಿ-ಜಯಪ್ರೀತ್ 7ನೇ, ಹಣಕಾಸು ಮಂತ್ರಿ-ಖದೀಜ ಸಲ್ವ ಪಿ., 6ನೇ, ಪರಿಸರ ಮಂತ್ರಿ-ಶ್ರೇಯಸ್ 7ನೇ, ನಿರೂಪ್ 7ನೇ, ಶಿಕ್ಷಣ ಮಂತ್ರಿ-ಫಾತಿಮಾ ಝೈಪ 7ನೇ, ಆರೋಗ್ಯ ಮಂತ್ರಿ-ಫಾತಿಮತ್ ಅಶ್ಅಲಾ 7ನೇ, ಫಾತಿಮತ್ ಸಲ್ವಾ 7ನೇ, ತೋಟಗಾರಿಕೆ ಮಂತ್ರಿ-ಅದ್ವಿತ್ 4ನೇ, ಸಲೂಪ್ 4ನೇ, ಕೃಷಿ ಮಂತ್ರಿ-ರಹಿಮಾನ್ 4ನೇ, ಸಾಂಸ್ಕೃತಿಕ ಮಂತ್ರಿ-ತ್ರಿಶಾ 5ನೇ, ಹವ್ಯ 5ನೇ, ಕ್ರೀಡಾಮಂತ್ರಿ-ಹವೀಶ್ 6ನೇ, ಚರಣ್ 5ನೇ, ವಿಜ್ಞಾನ ತಂತ್ರಜ್ಞಾನ ಮಂತ್ರಿ-ಫಾತಿಮಾ ಮುಬಾಶಿರಾ 5ನೇ, ಫಾತಿಮಾ ಅಯಿಫಾ 5ನೇ, ಗ್ರಂಥಾಲಯ ಮಂತ್ರಿ- ಆಯಿಷತ್ ಶಾಕಿರಾ 6ನೇ, ಫಾತಿಮತ್ ಅಶಿಮಾ 6ನೇ, ಆಹಾರ ಮಂತ್ರಿ-ಪವಿತ್ರ 5ನೇ, ರುತ್ವಿಕಾ 5ನೇ, ಆಯಿಷತ್ ಅಸೀರಾ 7ನೇ, ನೀರಾವತಿ ಮಂತ್ರಿ-ತಶ್ವೀನ್ 7ನೇ, ಜಯಪ್ರಿತ್ 7ನೇ, ಯಾಸಿನ್ 7ನೇ, ವಾರ್ತಾ ಮಂತ್ರಿ-ಫಾತಿಮಾ ಝೈಪ 7ನೇ, ಫಾತಿಮತ್ ಸಲ್ಮಾ 7ನೇ, ಕಾನೂನು ಮಂತ್ರಿ-ರುಮೈಝ ಫಾತಿಮಾ 6ನೇ, ಫಾತಿಮತ್ ಮರ್ವಾ 6ನೇ, ವಿರೋಧ ಪಕ್ಷದ ಉಪ ನಾಯಕ-ಮುಹಮ್ಮದ್ ಇರ್ಫಾನ್ 5ನೇ, ಅಬ್ದುಲ್ ಹಕೀಂ 5ನೇ, ಸುಫೈದ್ 5ನೇ, ಅಬ್ದುಲ್ ಹಫೀಝ್ 5ನೇ ಆಯ್ಕೆಗೊಂಡರು.
ಶಾಲಾ ಮುಖ್ಯಶಿಕ್ಷಕಿ ವಿದ್ಯಾ ಕೆ.,ಅವರು ಶಾಲಾ ಮಂತ್ರಿಗಳ ಜವಾಬ್ದಾರಿಯ ಕುರಿತು ವಿವರಿಸಿ ಪ್ರಮಾಣವಚನ ಬೋಧಿಸಿದರು. ಸಹಶಿಕ್ಷಕಿ ಮಾಲತಿ ಕೆ., ಅತಿಥಿ ಶಿಕ್ಷಕಿಯರಾದ ಚಿತ್ರಾವತಿ, ಪವಿತ್ರ ಸಹಕರಿಸಿದರು.