





ಆಲಂಕಾರು: ಒಂದು ತೆಂಗಿನ ಕಾಯಿ ತೂಕ 1.620 ಕೆ.ಜಿ. ಆದ್ರೂ ಇದು ನಿಜ. ಇದು ಕಡಬ ತಾಲೂಕಿನ ರಾಮಕುಂಜ ಗ್ರಾಮದ ದೇರೆಜಾಲು ಮನೆಯ ಪ್ರವೀಣ ಎಂಬವರ ತೋಟದಲ್ಲಿ ಬೆಳೆದ
ತೆಂಗಿನ ಕಾಯಿ. ಪ್ರಸ್ತುತ ಒಂದು ಕೆ.ಜೆ ತೆಂಗಿನ ಕಾಯಿಗೆ ಅಂದಾಜು 70 ರೂಪಾಯಿ ಇದ್ದು, 1620 ಗ್ರಾಂ ತೆಂಗಿನ ಕಾಯಿಗೆ ಅಂದಾಜು 113 ರೂ. ಆಗುತ್ತದೆ.
ಕೇವಲ ಒಂದು ತೆಂಗಿನ ಕಾಯಿ ಅಲ್ಲ… ಅವರ ತೋಟದಲ್ಲಿರುವ ಒಂದು ತೆಂಗಿನ ಮರದಲ್ಲಿ ಬೆಳೆಯುವ ಪ್ರತಿ ತೆಂಗಿನ ಕಾಯಿಗಳ ತೂಕವು ಸರಾಸರಿ ಅಂದಾಜು 1.5 ಕೆ.ಜಿ ಗಿಂತ ಅಧಿಕವಿರುತ್ತದೆ. ಕಳೆದ ವರ್ಷ ಇದಕ್ಕಿಂತಲೂ ಅಧಿಕ ತೂಕದ ತೆಂಗಿನಕಾಯಿ 1.950ಕೆ.ಜಿ ಇತ್ತು ಎಂದು ತಿಳಿಸಿದ್ದಾರೆ.
ಇವರ ತೋಟದಲ್ಲಿರುವ ಒಂದು ತೆಂಗಿನ ಮರದಲ್ಲಿ ಒಂದು ಗೊನೆಯಲ್ಲಿ 7 ಅಥವಾ 8 ತೆಂಗಿನ ಕಾಯಿ ಬೆಳೆಯುತ್ತದೆ. ವರ್ಷಂಪ್ರತಿ ಈ ಮರದಲ್ಲಿ 60ರಿಂದ 70 ತೆಂಗಿನ ಕಾಯಿ ಸಿಗುತ್ತದೆ ಎಂದು ಅವರ ಮನೆಯವರು ತಿಳಿಸಿದ್ದಾರೆ. ಇಂತಹ ತೆಂಗಿನ ಮರಗಳಿಂದ ರೈತನ ಕಲ್ಪವೃಕ್ಷವಾಗಬಹುದೆಂದು ಕೆಲವರು ತಿಳಿಸುತ್ತಿದ್ದು, ಕೃಷಿಕರ ಬಾಳಿಗೆ ಸಂತಸದ ವಿಚಾರವಾಗಿದೆ.












