ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ 2025-26ನೇ ಶೈಕ್ಷಣಿಕ ವರ್ಷದ ಕಿಂಡರ್ ಗಾರ್ಟನ್ ಹಾಗೂ ಝಹರತುಲ್ ಖುರ್‌ಆನ್ ವಿಭಾಗದ ಎಲ್‌ಕೆಜಿ ಹಾಗೂ ಎಲ್ ಝಿಕ್ಯೂ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಅಲಿಫ್ ಡೇ ಆಚರಿಸಲಾಯಿತು. ಝಿಕ್ಯೂ ವಿಭಾಗದ ವಿದ್ಯಾರ್ಥಿಗಳ ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಪಂಡಿತ ಮಹಮೂದುಲ್ ಫೈಝಿ ಓಲೆಮುಂಡೋವು ಕಾರ್ಯಕ್ರಮ ಉದ್ಘಾಟಿಸಿದರು.
ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಪುತ್ತುಬಾವ ಹಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲ ರಂಝೀ ಮುಹಮ್ಮದ್ ಶೈಕ್ಷಣಿಕ ಬೆಳವಣಿಗೆ ಹಾಗೂ ಸಂಸ್ಥೆಯ ವೈಶಿಷ್ಟ್ಯಗಳನ್ನು ಪೋಷಕರಿಗೆ ವಿವರಿಸಿದರು. ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಖಾದರ್ ಹಾಜಿ ಮಾತನಾಡಿದರು. ನಂತರ ಕಿಂಡರ್ ಗಾರ್ಟನ್ ಹಾಗೂ ಝೀಕ್ಯೂ ಕೋಆರ್ಡಿನೇಟರ್ಗಳಾದ ಶ್ರುತಿ ಶೆಟ್ಟಿ ಹಾಗೂ ಅನಿಶಾ ಮಾತನಾಡಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಅರೇಬಿಕ್ ಅಕ್ಷರ ಅಲಿಫ್ ಬರೆಸಿ ವಿದ್ಯಾರ್ಥಿಗಳನ್ನು ಹೊಸ ಶೈಕ್ಷಣಿಕ ವರ್ಷಕ್ಕೆ ಮುನ್ನುಡಿ ಬರೆಯಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಅಬ್ಬಾಸ್ ಹಾಜಿ ನೆಕ್ಕರೆ, ಪೋಷಕರಾದ ಮನ್ಸೂರ್, ಅರೇಬಿಕ್ ವಿಭಾಗದ ಮುಖ್ಯಸ್ಥ ರಶೀದ್ ಸಖಾಫಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರು ಮತ್ತು ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಕು.ಸಮೀನಾ ಸ್ವಾಗತಿಸಿದರು. ಶಿಕ್ಷಕಿಯರಾದ ಅಫ್ರೀನ್ ಹಾಗೂ ಸುನೈನಾ ಕಾರ್ಯಕ್ರಮ ನಿರೂಪಿಸಿದರು. ಇಸ್ಫಾನ ವಂದಿಸಿದರು.