





ಕಾವು: ಇಂದು ಎಸ್ಎಸ್ಎಲ್ಸಿ ಪರೀಕ್ಷೆ -2 ಫಲಿತಾಂಶ ಪ್ರಕಟವಾಗಿದ್ದು, ಬುಶ್ರಾ ಆಂಗ್ಲ ಮಾಧ್ಯಮ ಶಾಲೆ, ಇಬ್ಬರು ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಶಾಲಾ ಫಲಿತಾಂಶ 100 ಶೇಕಡವನ್ನು ಸಾಧಿಸಿದೆ.


ಪ್ರಥಮ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾದ 26 ಮಂದಿಯಲ್ಲಿ 24 ಮಂದಿ ತೇರ್ಗಡೆಯಾಗಿ ಎರಡು ವಿದ್ಯಾರ್ಥಿಗಳು ತಲಾ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದು, ಶೇಕಡ 92.31 ಫಲಿತಾಂಶ ದಾಖಲಾಗಿತ್ತು. ಇಂದು ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆ ಎರಡರ ಫಲಿತಾಂಶದಲ್ಲಿ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಫಲಿತಾಂಶ ಶೇಕಡ 100 ಫಲಿತಾಂಶವನ್ನು ಸಾಧಿಸಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.













