ಪುತ್ತೂರು: ಜಿಮ್ ವರ್ಕ್ ಔಟ್ ವೇಳೆ ಶಾಸಕ ಅಶೋಕ್ ರೈ ಅವರ ಕೈ ಗೆ ಮಸಲ್ ಕ್ಯಾಚ್ ಆದ ಬಗ್ಗೆ ವರದಿಯಾಗಿದೆ.
ಸಾಮಾಜಿಕ, ರಾಜಕೀಯ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿಯೊಂದಿರುವ ಶಾಸಕ ಅಶೋಕ್ ರೈ ಅವರು ದಿನಂಪ್ರತಿ ಜಿಮ್ ಗೆ ತೆರಳುವ ಮೂಲಕ ತಮ್ಮ ಫಿಟ್ ನೆಸ್ ಅನ್ನು ಕಾಯ್ದುಕೊಳ್ಳುತ್ತಿದ್ದು, ನಿನ್ನೆ ಜಿಮ್ ನಲ್ಲಿ ಡಂಬಲ್ಸ್ ಎತ್ತುವ ವೇಳೆ ಮಸಲ್ ಕ್ಯಾಚ್ ಆಗಿದೆನ್ನಲಾಗಿದೆ.
ಶಾಸಕರ ಕೈಗೆ ಬ್ಯಾಂಡೇಜ್ ಹಾಕಲಾಗಿದ್ದು, ಆದರೂ ವಿಶ್ರಾಂತಿ ಪಡೆಯದೆ ತಮ್ಮ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ.