





ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುನ್ನಡೆಸುತ್ತಿರುವ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯ 2025- 26ನೇ ಶೈಕ್ಷಣಿಕ ವರ್ಷದ ಪೋಷಕರ ಸಭೆಯು ಜೂ.19ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.



ಮುಖ್ಯ ಅತಿಥಿ ರಾಮಕೃಷ್ಣ ಭಟ್ ಬೆಳಾಲು “ಮಕ್ಕಳೊಂದಿಗೆ ನಾವು”ಎಂಬ ಸಂವಾದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಪೋಷಕರು ವಿದ್ಯಾರ್ಥಿಗಳ ವ್ಯಕ್ತಿತ್ವದ ಗುಣ, ನಡತೆ,ಶೀಲ ಸ್ವಭಾವದ ಬಗ್ಗೆ ಗಮನಹರಿಸುವುದು, ವಿದ್ಯಾರ್ಥಿಗಳನ್ನು ಇನ್ನೊಬ್ಬ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡದೆ ಪ್ರತಿಯೊಬ್ಬ ಮಗುವಿನಲ್ಲಿ ಒಂದು ಸಾಮರ್ಥ್ಯ ಅಡಕವಾಗಿರುತ್ತದೆ ಎಂದರು. ಮಕ್ಕಳಿಗೆ ಜವಾಬ್ದಾರಿಯ ಅರಿವನ್ನು ಬೆಳೆಸುವುದರ ಜೊತೆಗೆ ಅದನ್ನು ಟೀಕಿಸದೆ ಮೆಚ್ಚುಗೆ ವ್ಯಕ್ತಪಡಿಸಿ ಧನಾತ್ಮಕ ಮಾತುಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕೆಂದು ಆತ್ಮಸ್ಥೈರ್ಯವನ್ನು ತುಂಬಿಸಿದರು.





ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಬಿ. ಟಿ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಕಾಳಜಿ ವಹಿಸಿ ಸೃಜನಾತ್ಮಕವಾಗಿ ಬೆಳೆಯಲು ಪ್ರೇರಕದಾಯಕರಾಗಿರಬೇಕೆಂದು ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯನಿ ಲಕ್ಷ್ಮಿ ಪಿ ಶೈಕ್ಷಣಿಕ ವರ್ಷದ ಯೋಜನೆಗಳನ್ನು ಪರಿಚಯಿಸಿದರು. SDMC ಅಧ್ಯಕ್ಷ ಶೀನಪ್ಪ ಗೌಡ ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕಿ ಸವಿತಾ ಪಿ ಸಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಹೆಚ್ ವಂದಿಸಿದರು. ಸಹ ಶಿಕ್ಷಕಿ ಭವ್ಯ ವೈ, ನಿತ್ಯಾ ಬಿ ಸಹಕರಿಸಿದರು. ಗಣಿತ ಶಿಕ್ಷಕಿ ಶಕುಂತಲಾ ಕೆ ಕಾರ್ಯಕ್ರಮ ನಿರೂಪಿಸಿದರು.





