ಕುಂಬ್ರ ಅಂಗನವಾಡಿಗೆ ಪಾತ್ರೆ ಸ್ಟ್ಯಾಂಡ್, ಫ್ಯಾನ್ ಕೊಡುಗೆ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ಪೋಷಕರಾದ ಸುಜಾತ ಸಂತೋಷ್ ರೈ ಕುಂಬ್ರ ಅವರ ಮಗಳು ಹಂಸಿಕಾ ರೈಯವರ ಐದನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಪಾತ್ರೆ ಇಡುವ ಸ್ಟ್ಯಾಂಡ್ ಹಾಗೂ ಕಾವ್ಯ ಸತೀಶ್ ಗೌಡ ಇವರು ತಮ್ಮ ಮಗಳು ನೋಮಿಕಾಳ ಸಲುವಾಗಿ ಸೀಲಿಂಗ್ ಫ್ಯಾನ್ ಅನ್ನು ಕೊಡುಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಚಿತ್ರ ಎನ್ ಟಿ, ಪಂಚಾಯತ್ ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ ,ಬಿಟ್ ಪೊಲೀಸ್ ಅಸ್ತಮ್ ,ಕೆಪಿಎಸ್ ಶಾಲಾ ಶಿಕ್ಷಕಿ ಶೋಭಾ ಹಾಗೂ ಮಕ್ಕಳು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ, ಸಹಾಯಕಿ ರಾಜೀವಿ ಕೆ ಕೊಡುಗೆಯನ್ನು ಸ್ವೀಕರಿಸಿ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here