ಪುತ್ತೂರು: ಮಂಗಳೂರು ದಕ್ಷಿಣ ವಿಭಾಗ ಇನ್ನರ್ವಿಲ್ ಕ್ಲಬ್ ಮತ್ತು ಮಂಗಳ ಸ್ವಿಮ್ಮಿಂಗ್ ಕ್ಲಬ್ ಸಹಯೋಗದಲ್ಲಿ ನಡೆದ ಪ್ರಥಮ ಜಿಲ್ಲಾ ಮಟ್ಟದ ನೋನ್-ಮೆಡಲಿಸ್ಟ್ ಈಜು ಸ್ಪರ್ಧೆ-2025ರಲ್ಲಿ, ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ಇಶಾನಿ ಆರ್. ರೈ ವೈಯುಕ್ತಿಕ ಚಾಂಪಿಯನ್ಶಿಪ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಇಶಾನಿ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್, 50 ಮೀಟರ್ ಫ್ರೀಸ್ಟೈಲ್ ಮತ್ತು 50 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗಗಳಲ್ಲಿ ಪ್ರಥಮ ಬಹುಮಾನ ಪಡೆದರು. ಅಲ್ಲದೆ, 4*50 ಮೀಟರ್ ಮಿಕ್ಸ್ಡ್ ಫ್ರೀಸ್ಟೈಲ್ ರಿಲೆಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ.
ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಸದಸ್ಯರಾಗಿರುವ ಇಶಾನಿ ಕುರಿಯ ಗ್ರಾಮದ ಸಂಪ್ಯದಮೂಲೆ ನಿವಾಸಿ, ನೆಲ್ಯಾಡಿ ಉದನೆ ಶಾಲೆಯ ದೈಹಿಕ ಶಿಕ್ಷಕ ರಾಜೇಶ್ ರೈ ಮತ್ತು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಆಶಾಲತಾ ಕೆ. ಅವರ ಪುತ್ರಿ.