ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಶಾಲಾ ಮಂತ್ರಿಮಂಡಲ ರಚನೆ ಶಾಲಾ ನಾಯಕಿ ಶಾವ್ಯ.ಯು.ರೈ, ಉಪನಾಯಕ ಚಿರಾಗ್

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ 2025 -26ನೇ ಶಾಲಾ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲಕ್ಕೆ ಚುನಾವಣೆ ನಡೆಯಿತು. ಶಾಲಾ ನಾಯಕಿಯಾಗಿ ಹತ್ತನೇ ತರಗತಿ ಯ ಬಹುಮುಖ ಪ್ರತಿಭೆ ಕುಮಾರಿ ಶಾವ್ಯ.ಯು. ರೈ ಆಯ್ಕೆಗೊಂಡಿರುತ್ತಾರೆ. ಉಪನಾಯಕನಾಗಿ 7ನೇ ತರಗತಿ ವಿದ್ಯಾರ್ಥಿ ಚಿರಾಗ್, ಕಾರ್ಯದರ್ಶಿಯಾಗಿ 9ನೇ ತರಗತಿ ವಿದ್ಯಾರ್ಥಿ ಸಿಂಚನ್ ರೈ, ಜತೆಕಾರ್ಯದರ್ಶಿಯಾಗಿ 8ನೇ ತರಗತಿ ವಿದ್ಯಾರ್ಥಿ ನಿಮಿತ್ ರೈ ಇವರುಗಳು ಆಯ್ಕೆಗೊಂಡಿರುತ್ತಾರೆ.

9ನೇ ತರಗತಿ ವಿದ್ಯಾರ್ಥಿನಿ ವೃದ್ಧಿ.ಸಿ ಹಾಗೂ ವಿದ್ಯಾರ್ಥಿ ಮೈತ್ರೇಯ ರಾಮ ಇವರುಗಳು ಶಿಕ್ಷಣ ಮಂತ್ರಿಗಳಾಗಿ ಆಯ್ಕೆಗೊಂಡು, ಸಾಂಸ್ಕೃತಿಕ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿನಿ ಕೃತಿ ಕೆ ಎಸ್ ಹಾಗೂ ಎಂಟನೇ ತರಗತಿ ವಿದ್ಯಾರ್ಥಿ ಅಭಿನವರಾಜ್ ಆಯ್ಕೆಗೊಂಡಿರುತ್ತಾರೆ. ಕೃಷಿ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿಗಳಾದ ಶೃತನ್ ಹಾಗೂ ಸಮರ್ಥ್ ರೈ, ಆಹಾರ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿ ಭುವನ್ ರೈ ಹಾಗೂ ಎಂಟನೇ ತರಗತಿ ವಿದ್ಯಾರ್ಥಿನಿ ಸಿಂಚನ ಬಿ ಎಸ್ ಆಯ್ಕೆಗೊಂಡಿರುತ್ತಾರೆ. ಕ್ರೀಡಾ ಮಂತ್ರಿಗಳಾಗಿ 9ನೇ ತರಗತಿ ವಿದ್ಯಾರ್ಥಿ ಪವನ್ ಸಿ ಎಚ್ ಹಾಗೂ ಎಂಟನೇ ತರಗತಿ ವಿದ್ಯಾರ್ಥಿ ಜೀವಿತ್ ಆಯ್ಕೆಗೊಂಡು,  ಆರೋಗ್ಯ ಮಂತ್ರಿಗಳಾಗಿ ಎಂಟನೇ ತರಗತಿ ವಿದ್ಯಾರ್ಥಿ ಹೃಷಿಕೇಶ ಮತ್ತು 9ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಪಿ.ಬಿ, ನೀರಾವರಿ ಮಂತ್ರಿಗಳಾಗಿ ಎಂಟನೇ ತರಗತಿ ವಿದ್ಯಾರ್ಥಿಗಳಾದ ರಾಹುಲ್ ಧ್ಯಾನ್ ಪ್ರನ್ವಿ ಪ್ರಸಾದ್ ಹಾಗೂ ಧನ್ವಿ.ರೈ ಇವರುಗಳು ಆಯ್ಕೆಗೊಂಡಿರುತ್ತಾರೆ. ಚುನಾವಣಾ ಕಣದಲ್ಲಿ ಚುನಾವಣಾಧಿಕಾರಿ ರಂಜಿತ್ ಕೆ.ಎಂ ಹಾಗೂ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here