ವಿದ್ಯಾಮಾತಾದಿಂದ ದೈಹಿಕ ಸದೃಢತೆಯ ಉಚಿತ ತರಬೇತಿ ಪ್ರಾರಂಭ

0

ಪುತ್ತೂರು : ಸರಕಾರಿ ನೇಮಕಾತಿ ಅದರಲ್ಲೂ ಅಗ್ನಿಪಥ್ ಮತ್ತು SSC GD ಸೇರಿದಂತೆ ಸಶಸ್ತ್ರ ಪಡೆಗಳಿಗೆ ತರಬೇತಿ ನೀಡುವ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಿಂದ ಸದ್ಯ SSC GD ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬರುವ ದೈಹಿಕ ಸದೃಢತೆಯ ಪರೀಕ್ಷೆಗೆ (physical fitness) ತಯಾರಾಗುತ್ತಿರುವವರಿಗೆ ಮತ್ತು ಅಗ್ನಿಪಥ್ ನೇಮಕಾತಿಗೆ ಮೈದಾನ ತರಬೇತಿಯನ್ನು ನುರಿತ ತಂಡದ ಮುಖೇನ ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ.

ಈಗಾಗಲೇ ಅತ್ಯುತ್ತಮ ತರಬೇತಿಯ ಮೂಲಕ 26 ಮಂದಿ ಯುವಕರು ವಿವಿಧ ಸಶಸ್ತ್ರ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ನಡೆಯಲಿರುವ ವಿವಿಧ ಹುದ್ದೆಗಳ ಉಚಿತ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಕಾಡೆಮಿ ಪ್ರಕಟಣೆ ತಿಳಿಸಿದೆ.ಇನ್ನೂ ಹೆಚ್ಚಿನ ವಿವರಗಳಿಗಾಗಿ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಅಥವಾ ದೂರವಾಣಿ 9620468869 , 9148935808 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here