ರಾಷ್ಟ್ರೀಯ ಮಟ್ಟದ JAM ಪರೀಕ್ಷೆ : ಸಾರ್ಯಬೀಡಿನ ವೈಭವೀ ಶೆಟ್ಟಿಗೆ ಆಲ್ ಇಂಡಿಯಾ ರ‍್ಯಾಂಕ್

1

ಪುತ್ತೂರು:ರಾಷ್ಟ್ರೀಯ ಮಟ್ಟದ ಪರೀಕ್ಷೆಯಾದ joint Admission Test For Master(JAM) ನಲ್ಲಿ ಬೆಳಿಯೂರುಕಟ್ಟೆ ಸಾರ್ಯಬೀಡಿನ ವೈಭವೀ ಶೆಟ್ಟಿ ಆಲ್ ಇಂಡಿಯಾ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.


ಭಾರತ ದೇಶದಿಂದ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು ವೈಭವೀ ಶೆಟ್ಟಿ ದೇಶದಲ್ಲಿ 147ನೇ ರ‍್ಯಾಂಕ್ ಹಾಗೂ ಕರ್ನಾಟಕ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡು ಬೆಂಗಳೂರಿನಲ್ಲಿರುವ ಭಾರತದ ಶ್ರೇಷ್ಠ ಸಂಶೋಧನಾ ಮತ್ತು ಉನ್ನತ ಶಿಕ್ಷಣ ಸಂಸ್ಥೆಯಾದ ಐಐಎಸ್ಸಿ ಎಂ.ಎಸ್ಸಿ ಪಿಎಚ್‌ಡಿ ತರಬೇತಿ ಪಡೆಯಲು ಆಯ್ಕೆಯಾಗಿದ್ದಾರೆ. ದೆಹಲಿಯ ಕೋಚಿಂಗ್ ಸೆಂಟರ್ ಮುಖಾಂತರ ಆನ್‌ಲೈನ್ ತರಗತಿಯಲ್ಲಿ ಕೋಚಿಂಗ್ ಪಡೆದುಕೊಂಡು ಪರೀಕ್ಷೆಗೆ ಹಾಜರಾಗಿದ್ದರು.


ಇವರು ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಸಾರ್ಯಬೀಡು ಬಾಬಾ ಪ್ರಕಾಶ್ ಶೆಟ್ಟಿ ಮತ್ತು ವಾಣಿ ಶೆಟ್ಟಿ ದಂಪತಿ ಪುತ್ರಿ. ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.

1 COMMENT

LEAVE A REPLY

Please enter your comment!
Please enter your name here