





ಪುತ್ತೂರು: ಆಟೋ ರಿಕ್ಷಾದ ಹಿಂಬದಿಯ ಗ್ಲಾಸ್ ಒಡೆದು ಹಾನಿಗೊಳಿಸಿದ ವಿಚಾರದಲ್ಲಿ ಗ್ಲಾಸ್ ಒಡೆದಿರುವುದಾಗಿ ಎನ್ನಲಾದ ವ್ಯಕ್ತಿಗಳಿಬ್ಬರ ಮತ್ತು ರಿಕ್ಷಾ ಚಾಲಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜೂ.26 ರಂದು ರಾತ್ರಿ ನೆಲ್ಲಿಕಟ್ಟೆಯಲ್ಲಿ ನಡೆದಿದೆ.



ನೆಲ್ಲಿಕಟ್ಟೆ ಈಶ ವಿದ್ಯಾಲಯದ ಬಳಿ ನಿಂತಿದ್ದ ಆಟೋ ರಿಕ್ಷಾದ ಹಿಂಬದಿಯ ಗಾಜು ಒಡೆದ ಸ್ಥಿತಿಯಲ್ಲಿತ್ತು. ಗಮನಿಸಿದ ರಿಕ್ಷಾ ಚಾಲಕ ರಿಕ್ಷಾದ ಪಕ್ಕದಲ್ಲೇ ನಶೆಯಲ್ಲಿದ್ದ ವ್ಯಕ್ತಿಗಳಿಬ್ಬರನ್ನು ಸ್ಥಳಿಯರೊಂದಿಗೆ ಸೇರಿ ವಿಚಾರಿಸಿದಾಗ ಓರ್ವ ವ್ಯಕ್ತಿಯ ಕೈಯಲ್ಲಿ ರಕ್ತ ಚಿಮ್ಮುತ್ತಿರುವುದು ಬೆಳಕಿಗೆ ಬಂದಾಗ ಆತನ ಮೇಲೆ ನೆರೆದವರಿಗೆ ಸಂಶಯ ವ್ಯಕ್ತವಾಗಿ ಆತನನ್ನು ತರಾಟೆಗೆತಿಕೊಂಡರು.






ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸುವ ಮಟ್ಟಕ್ಕೆ ಮಾತಿನಚಕಮಕಿ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಪೊಲೀಸರು ವಿಚಾರಣೆ ನಡೆಸಿ ಅಕ್ಕಪಕ್ಕದವರ ವಿಡಿಯೋ ಮಾಡಿದರು. ಈ ನಡುವೆ ಗಾಜಿಗೆ ಹಾನಿ ಮಾಡಿದವರು ತೆರಳಿದರು. ರಿಕ್ಷಾ ಚಾಲಕನು ತೆರಳಿದ. ಕೊನೆಗೆ ಪೊಲೀಸರೂ ತೆರಳಿದರು.







