ಮಾಣಿ ಕರ್ನಾಟಕ ಆಂಗ್ಲ ಮಾಧ್ಯಮ ಶಾಲಾ ಮುಖ್ಯಮಂತ್ರಿಯಾಗಿ ಕ್ಲೇನೆತ್ ಸಿಕ್ವೇರಾ – ಉಪಮುಖ್ಯಮಂತ್ರಿಯಾಗಿ ಫಿದ ಮರಿಯಮ್

0

ವಿಟ್ಲ: ಮಾಣಿ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಮಾಣಿ‌ ಗ್ರಾ.ಪಂ. ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ಶಾಲೆಯ ಸಂಚಾಲಕರಾದ ಹಾಜಿ ಇಬ್ರಾಹೀಂ, ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸಿ‌ ಉದ್ಘಾಟಿಸಿದರು. ಶಾಲಾ ಮುಖ್ಯಮಂತ್ರಿಯಾಗಿ ಕ್ಲೇನೆತ್ ಸಿಕ್ವೇರಾ, ಉಪಮುಖ್ಯಮಂತ್ರಿಯಾಗಿ ಫಿದ ಮರಿಯಮ್ಮ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಸಾನ್ವಿ ಕುಲಾಲ್, ಆರೋಗ್ಯ ಮಂತ್ರಿಯಾಗಿ ಪ್ರಿನೀತ್ ಸನಿಲ್. ವಿ, ಕ್ರೀಡಾ ಮಂತ್ರಿಯಾಗಿ ಮುಹಮ್ಮದ್ ತ್ವಾಹಿಫ್ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಜಾಹ್ನವಿ ಆಯ್ಕೆಯಾದರು.

LEAVE A REPLY

Please enter your comment!
Please enter your name here