ಮುಕ್ವೆ: ಮರ ಬಿದ್ದು ಧರೆಗುರುಳಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ – ಲಕ್ಷಾಂತರ ರೂ. ನಷ್ಟ

0

ಪುತ್ತೂರು: ಗಾಳಿ ಮಳೆಗೆ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ಟ್ರಾನ್ಸ್’ಫಾರ್ಮರ್ ರಸ್ತೆಗೆ ಅಡ್ಡವಾಗಿ ಬಿದ್ದ ಘಟನೆ ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಮುಕ್ವೆಯ ಮಣಿಯದಲ್ಲಿ ಜೂ.26ರಂದು ನಡೆದಿದೆ.

ಟ್ರಾನ್ಸ್’ಫಾರ್ಮರ್ ಬೀಳುವ ರಭಸಕ್ಕೆ ಆಸುಪಾಸಿನ ಐದು ವಿದ್ಯುತ್ ಕಂಬಗಳು ಧರೆಗುರುಳಿದೆ. ವಿದ್ಯುತ್ ತಂತಿಗಳು ರಸ್ತೆ ತುಂಬಾ ಹರಡಿಕೊಂಡಿದೆ.

ಮುಕ್ವೆ ಶಾಲೆಯಿಂದ ಎಲಿಕಕ್ಕೆ ಹೋಗುವ ರಸ್ತೆ ಇದಾಗಿದ್ದು ಸಂಜೆ 5 ಗಂಟೆ ವೇಳೆಗೆ ಮರ ಬಿದ್ದಿದೆ. ಈ ವೇಳೆ ಅದೃಷ್ಟವಶಾತ್ ರಸ್ತೆಯಲ್ಲಿ ಮಕ್ಕಳು, ನಾಗರಿಕರು ಇರದ ಕಾರಣ ಅಪಾಯವೊಂದು ತಪ್ಪಿದೆ. ಶಾಲೆ ಬಿಡುವ ಹೊತ್ತಿಗೆ ಮರ ಬೀಳುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.

ಮಳೆಗಾಲದ ಮುನ್ನೆಚ್ಚರಿಕೆ ಪಾಲಿಸಿ ಅಪಾಯಕಾರಿ ಮರಗಳನ್ನು ಇಲಾಖೆ ತೆರವು ಮಾಡಿದ್ದಲ್ಲಿ ಲಕ್ಷಾಂತರ ರೂ ನಷ್ಟ ಸಂಭವಿಸುವುದನ್ನುತಪ್ಪಿಸಬಹುದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here