ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ “ಆರ್ಟ್ ಆಫ್ ಪೇರೆಂಟಿಂಗ್” ಪೋಷಕರ ಕಾರ್ಯಾಗಾರ

0

ಪೋಷಕರು ಮಕ್ಕಳ ಶಿಕ್ಷಣ, ವೈಯಕ್ತಿಕ ಬೆಳವಣಿಗೆಯಲ್ಲಿ ಸಮರ್ಪಿತ ಸಮಯ ನೀಡಬೇಕು: ಅಬ್ದುಲ್ ರಝಾಕ್ ಮಾಸ್ಟರ್

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳ ಪೋಷಕರಿಗಾಗಿ “ಆರ್ಟ್ ಆಫ್ ಪೇರೆಂಟಿಂಗ್” ಪೋಷಕರ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಹಿರಿಯ ಉಪನ್ಯಾಸಕ ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೋಷಕರು ಮಕ್ಕಳ ಶಿಕ್ಷಣ ಹಾಗೂ ವೈಯಕ್ತಿಕ ಬೆಳವಣಿಗೆಯಲ್ಲಿ ಸಮರ್ಪಿತ ಸಮಯ ನೀಡಬೇಕು ಎಂದರು.

ಶಾಲೆಯ ಅಧ್ಯಕ್ಷರಾದ ಫಾತಿಮಾ ನಸ್ರೀನ್ ಬಷೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿರ್ದೇಶಕ ನೌಷೀನ್ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ಸ್ವಾಗತಿಸಿದರು. ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಶಾಲೆಯ ಮೂಲ ನಿಯಮಾವಳಿಗಳ ಬಗ್ಗೆ ವಿವರ ನೀಡಿ, ವಂದಿಸಿದರು. ಚಾರಿಷ್ಮಾ ಮತ್ತು ಆಶುರಾ ಬೀವಿ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here