ಕಬಕ ಗ್ರಾಮ ಪಂಚಾಯತ್‌ನಲ್ಲಿ ಜನಸುರಕ್ಷಾ ಯೋಜನೆಯ ಕುರಿತು ಕಾರ್ಯಕ್ರಮ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಕಬಕ ಶಾಖಾ ವತಿಯಿಂದ ಲೀಡ್‌ ಬ್ಯಾಂಕ್‌ ಇವರ ಸೂಚನೆಯ ಮೇರೆಗೆ ಜೂ.27ರಂದು ಕಬಕ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಜನಸುರಕ್ಷಾ ಯೋಜನೆಯ ಬಗ್ಗೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ಸುಶೀಲ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಎಫ್‌ ಎಲ್‌ ಸಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ವಿಜಯ್‌ ಮಾತನಾಡಿ, ಪ್ರಧಾನಿ ಮಂತ್ರಿಗಳ ಪಿಎಂಎಸ್ ಬಿವೈ ಮತ್ತು ಪಿಎಂ ಜೆಜೆವೈ ಹಾಗೂ ಎಪಿವೈ ವಿಮೆಯನ್ನು ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಮತ್ತು ಅಪಘಾತಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಿ, ಹಾಗೂ ಪ್ರತೀಯೊಬ್ಬರು ವಿಮೆ ಮಾಡಿಕೊಳ್ಳುವ ಮೂಲಕ ಕಬಕ ಗ್ರಾಮವನ್ನು ವಿಮಾ ಮುಕ್ತ ಗ್ರಾಮವಾಗಿ ಮಾಡೋಣ. ವಿಮೆಯಿಂದ ನಮಗಲ್ಲದೆ ಉಳಿದ ಜನರಿಗೂ ಉಪಯೋಗವಾಗುತ್ತದೆ. ಪ್ರತೀಯೊಬ್ಬರು ತಾವು ಯಾವ ಬ್ಯಾಂಕ್‌ ನಲ್ಲಿ ಖಾತೆ ಹೊಂದಿರುತ್ತೀರೋ ಅಲ್ಲಿಯೇ ವಿಮೆ ಮಾಡಿಕೊಳ್ಳಿ, ಇನ್ನು ನಮ್ಮ ಖಾತೆಗಳಿಗೆ ಕೆವೈಸಿ ಮಾಡಿಕೊಳ್ಳುವ ಮೂಲಕ ಅಪ್ಡೇಟ್‌ ಮಾಡಿಸಿಕೊಳ್ಳುವುದು ಅತೀ ಅಗತ್ಯ ಎಂದರು.

" alt="" width="300" height="450" />

ಗ್ರಾ.ಪಂ ಕಾರ್ಯದರ್ಶಿ ಸುರೇಶ್‌ ನಾಯ್ಕ್‌ ಗ್ರಾ.ಪಂ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನವೋದಯ ಪ್ರೇರಕಿ ಮಾಲತಿ ಸ್ವ-ಸಹಾಯ ಸಂಘದ ರಚನೆ ಮತ್ತು ಸಾಲಗಳ ಬಗ್ಗೆ ಮಾಹಿತಿ ನೀಡಿದರು.

ಕಬಕ ಶಾಖೆಯ ವ್ಯವಸ್ಥಾಪಕರಾದ ಸೀತರಾಮ ಎ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಗ್ರಾ.ಪಂ ಪಿಡಿಓ ಆಶಾ ಮತ್ತು ನವೋದಯ ಪ್ರೇರಕಿ ರಶ್ಮಿ ಉಪಸ್ಥಿತರಿದ್ದರು. ನವೋದಯ ಪ್ರೇರಕಿ ಮಾಲತಿ ಪ್ರಾರ್ಥಿಸಿದರು. ಪ್ರಾಯೋಗಿಕ ತರಬೇತಿಯ ವಿದ್ಯಾರ್ಥಿನಿ ನವ್ಯಶ್ರೀ ವಂದಿಸಿದರು. ವಿದ್ಯಾರ್ಥಿನಿ ವಂಶಿ ಸಹಕರಿಸಿದರು.
ಶಾಖಾ ಸಿಬ್ಬಂಧಿಗಳಾದ ಕಿರಣ್‌, ಅಕ್ಷತಾ, ಸತೀಶ್‌ ಹಾಗೂ ಶಾಖೆಯ ಸರಾಫರರಾದ ರವೀಂದ್ರ ಸಹಕರಿಸಿದರು.ಕಾರ್ಯಕ್ರಮದಲ್ಲಿ 50ಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here