ಕಡಬ: ಇಲ್ಲಿನ ಮಾದರಿ ಹಿ.ಪ್ರಾ,ಶಾಲೆಯಲ್ಲಿ ಎಂ.ಆರ್.ಪಿ.ಎಲ್.ನ 7 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಶೌಚಾಲಯ ಕಟ್ಟಡವನ್ನು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಜು.1ರಂದು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹೇಶ್ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ, ಪರಿಸರ ಸ್ವಚ್ಚತೆಯಿಂದ ಪರಿಸರದ ಜನತೆಯಲ್ಲಿ ಆರೋಗ್ಯವೂ ವೃದ್ದಿಯಾಗುತ್ತದೆ, ಸ್ವಚ್ಚತೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಶಾಲೆಯ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಿದ ಎಂ. ಆರ್.ಪಿ.ಎಲ್, ಸಂಸ್ಥೆ ಶಾಲೆಯ ಅಗತ್ಯತೆಗಳನ್ನು ಪೂರೈಸುವಲ್ಲಿ ಕೈ ಜೋಡಿಸಿದೆ ಎಂದರು.
ಎಂ.ಆರ್.ಪಿ.ಎಲ್. ಸಂಸ್ಥೆಯ ಪ್ರತಿನಿಧಿ ಪ್ರದೀಪ್ ಕುಮಾರ್, ಮಾಜಿ ಜಿಲ್ಲಾ ಪರಿಷದ್ ಸದಸ್ಯ ಸೈಯದ್ ಮೀರಾ ಸಾಹೇಬ್, ನಿವೃತ್ತ ಶಿಕ್ಷಕ ಜನಾರ್ದನ ಗೌಡ ಪಣೆಮಜಲು, ಕ್ಲಸ್ಟರ್ ಮುಖ್ಯಸ್ಥ ಗಣೇಶ್ ನಡುವಾಲು, ಕಡಬ ಉಪ ತಹಸೀಲ್ದಾರ್ ಗೋಪಾಲ್ ಕೆ. ಮಾಜಿ ಗ್ರಾ.ಪಂ. ಸದಸ್ಯೆ ಶಾಲಿನಿ ಸತೀಶ್ ನಾಕ್ ಅವರು ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಕೃಷ್ಣ ಶೆಟ್ಟಿ ಕಡಬ ಪ್ರಮುಖರಾದ ಸತೀಶ್ ನಾಯಕ್, ಮಾಜಿ ಕಡಬ ಗ್ರಾ.ಪಂ. ಅಧ್ಯಕ್ಷ ಹನೀಫ್ ಕೆ.ಎಂ. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಆಚಾರ್, ಮಾಜಿ ಗ್ರಾ,ಪಂ. ಸದಸ್ಯೆ ಸರೋಜಿನಿ ಆಚಾರ್ಯ, ಕಳಾರ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಂಝ ಕಳಾರ, ಶಿಕ್ಷಕ ಕಿಟ್ಟಣ್ಣ ರೈ, ಎಲ್.ಕೆ.ಜಿ. ಯು.ಕೆ.ಜಿ. ಸಮಿತಿಯ ಅಧ್ಯಕ್ಷ ಹಾರೀಸ್ ಕಳಾರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಂ. ಆರ್.ಪಿ.ಎಲ್. ಸಂಸ್ಥೆಯ ಪ್ರತಿನಿಧಿ, ಇಂಜಿನಿಯರ್ ಪ್ರದೀಪ್ ಕುಮಾರ್ ಹಾಗೂ ಇಂಜಿನಿಯರ್ ರಕ್ಷಿತ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಆನಂದ ಅಜಿಲ ಅವರು ಸ್ವಾಗತಿಸಿ, ಹಿರಿಯ ಶಿಕ್ಷಕಿ ಶೋಭಾ ಬಿ. ವಂದನಾರ್ಪಣೆ ಸಲ್ಲಿಸಿದರು. ಅತಿಥಿ ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ತೀರ್ಥವತಿ, ನಮೃತ, ಭವ್ಯಶ್ರೀ, ಎಲ್.ಕೆ.ಜಿ. ಸಹಾಯಕ ಶಿಕ್ಷಕಿ ಶೋಭಾ ಪಿ.ಎ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಉಮೇಶ್ ಹಾಗೂ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.