ಬಡಗನ್ನೂರು: ಬಿಲ್ಲವ ಗ್ರಾಮ ಸಮಿತಿ ಪಡುವನ್ನೂರು, ಸುಳ್ಯಪದವು ಇದರ ವಾರ್ಷಿಕ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ ಕಾರ್ಯಕ್ರಮವು ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ ಅಧ್ಯಕ್ಷತೆಯಲ್ಲಿ ಜೂ.29ರಂದು ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರು ಬಿಲ್ಲವ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೖೆಸಿದರು.

ಸಾಧಕರಿಗೆ ಸನ್ಮಾನ:-
ವಿವಿಧ ಕ್ಷೇತ್ರದಲ್ಲಿ ಸಾಧನೆಗೖೆದ ಸತೀಶ್ ಕುಮಾರ್ ಕೆಡೆಂಜಿ, ಆರ್. ಸಿ ನಾರಾಯಣ ರೆಂಜ, ರಾಜೇಶ್ ಎಂ, ಮಾಧವ ಸಾಲಿಯಾನ್ ಮರದಮೂಲೆ, ಪ್ರಕಾಶ್ ಮರದಮೂಲೆ ವಿಠಲ ಸುವರ್ಣ ಇವರನ್ನು ಸನ್ಮಾನಿಸಲಾಯಿತು. ಸಮಿತಿ ವತಿಯಿಂದ ಸುಮಾರು 50 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಛತ್ರಿ ವಿತರಿಸಲಾಯಿತು.
ಸಮಿತಿ ರಚನೆ:
ಪಡುವನ್ನೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ ಜನಾರ್ಧನ ಪೂಜಾರಿ ಪದಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಮುಖ್ಯ ಅಥಿತಿಗಳಾಗಿ ಪುತ್ತೂರು ಬಿಲ್ಲವ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ ಜಿ.ಕೆ, ಕೋಶಾಧಿಕಾರಿ ಮಹೇಶ್ಚಂದ್ರ ಸಾಲಿಯಾನ್, ಆರ್. ಸಿ ನಾರಾಯಣ ರೆಂಜ, ಪುತ್ತೂರು ಮಹಿಳಾ ವೇದಿಕೆ ಅಧ್ಯಕ್ಷೆ ವಿಮಲಾ ಸುರೇಶ್ ಹಾಗೂ ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ವಿಠಲ ಸುವರ್ಣ, ಮಹಿಳಾ ಸಮಿತಿಯ ಅಧ್ಯಕ್ಷೆ ವಿನಯ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕು. ವಿನೀಶಾ ಪ್ರಾರ್ಥಿಸಿ, ಗಿಲೀಶ್ ಕುಮಾರ್ ಕನ್ನಡ್ಕ ಸ್ವಾಗತಿಸಿ, ವಂದಿಸಿದರು.