ಪುತ್ತೂರು: ಪ್ರತಿಷ್ಠಿತ ರೋಟರಿ ಕ್ಲಬ್ ಪುತ್ತೂರು ಇದರ ಅಂಗಸಂಸ್ಥೆ ರೊಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಬಪ್ಪಳಿಗೆ ಕರ್ಕುಂಜ ಅಶ್ವಿನಿ ಕ್ಲಿನಿಕ್ ನ ವೈದ್ಯರಾದ ಡಾ.ಅವಿನಾಶ್ ಕಲ್ಲೂರಾಯ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೊಟರಾಕ್ಟ್ ಕ್ಲಬ್ ಪುತ್ತೂರು ಇದರ ನೂತನ ಅಧ್ಯಕ್ಷ ರೋ.ವಿನೀತ್, ಕಾರ್ಯದರ್ಶಿ ನವನೀತ್, ಕೆನರಾ ವಲಯ ಪ್ರತಿನಿಧಿ ಸುಬ್ರಮಣಿ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಎಡ್ವರ್ಡ್, ಜಿಲ್ಲಾ ಸಂಪಾದಕ ವಿಖ್ಯಾತ್, ಜೊತೆಕಾರ್ಯದರ್ಶಿ ಹರ್ಷಿತ್ ಉಪಸ್ಥಿತರಿದ್ದರು.