ಸಂಜಯನಗರ: ಮನೆಯೊಂದರ ಎಸಿ ಉಪಕರಣಕ್ಕೆ ಬೆಂಕಿ – ಹಾನಿ

0

ಪುತ್ತೂರು: ಮನೆಯೊಂದರ ಎಸಿ ಉಪಕರಣಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹಾನಿಯಾದ ಘಟನೆ ಸಂಜನಯಗರದಲ್ಲಿ ಜು.4ರಂದು ನಸುಕಿನ ಜಾವ ನಡೆದಿದೆ.

ಕೂರ್ನಡ್ಕದ ಸಂಜಯನಗರ ಲಕ್ಷ್ಮೀಪ್ರಸನ್ನ ಲೇ ಔಟ್ ನಿವಾಸಿ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಎಂಬವರ ಮನೆಯಲ್ಲಿ ಎ.ಸಿ ಉಪಕರಣದಲ್ಲಿ ಹೊಗೆ ಕಾಣಿಸಿಕೊಂಡು ಕೆಲ ಕ್ಷಣದಲ್ಲಿ ಬೆಂಕಿ ಹತ್ತಿಕೊಂಡಿದೆ. ಘಟನೆಯಿಂದಾಗಿ ಮನೆಯ ಮಂಚ, ಕಪಾಟುಗಳಿಗೆ ಹಾನಿಯಾಗಿದೆ. ಮನೆ ಮಂದಿ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here